Publish Date: Wed, 29 Jun 2022 (19:41 IST)
Updated Date: Wed, 29 Jun 2022 (19:43 IST)
ಬಿಎಂಟಿಸಿಯಲ್ಲಿ ದಿನ ದಿನಕ್ಕೂ ಡೀಸೆಲ್ ಕೊರತೆ ಬಿಗಡಾಯಿಸುತ್ತಿದೆ. ಇಂದು ಬಹುತೇಕ ಡಿಪೋಗಳಲ್ಲಿ ಡೀಸೆಲ್ ಸ್ಟಾಕ್ ಖಾಲಿಯಾಗುವ ಸಾಧ್ಯತೆಗಳಿವೆ. ಹಾಗಾದ್ರೆ ಸ್ಟಾಕ್ ಡೀಸೆಲ್ ಮುಗಿದ್ಮೇಲೆ ಬಸ್ ಗಳ ಸಂಚಾರ ಕಥೆಯೇನು ಎಂಬ ಪ್ರಶ್ನೆ ಶುರುವಾಗಿದೆ.ಈಗ ನಿಗಮವು ಡಿಸೇಲ್ ಕೊರತೆಯಿಂದ ಖಾಸಗಿ ಪೆಟ್ರೋಲ್ ಬಂಕ್ ಮೊರೆ ಹೋಗುತ್ತಿದೆ. ಕಳೆದ ನಾಲ್ಕೈದು ದಿನದಿಂದ ಕೇವಲ ಕೆಲ ಡಿಪೋಗಳಲ್ಲಿ ಮಾತ್ರ ಡಿಸೇಲ್ ಕೊರತೆ ಎದುರಾಗಿತ್ತು. ಆದರೆ ನಾಳೆಯಿಂದ ಡಿಪೋಗಳಲ್ಲಿ ನಿಲ್ಲುತ್ತಾವಾ ಬಿಎಂಟಿಸಿ ಬಸ್ ಗಳು ಅನ್ನುವ ಪ್ರಶ್ನೆ ಶುರುವಾಗಿದೆ.