Publish Date: Mon, 27 Feb 2023 (17:13 IST)
Updated Date: Mon, 27 Feb 2023 (17:17 IST)
ಮಾಜಿ ಮುಖ್ಯಮಂತ್ರಿ B.S. ಯಡಿಯೂರಪ್ಪ ಇಂದು 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜನ್ಮದಿನ ನಿಮಿತ್ತ ಮಾಜಿ ಸಿಎಂ ಯಡಿಯೂರಪ್ಪ ಶಿವಮೊಗ್ಗದ ತಿಲಕ ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ರಾಯರಿಗೆ ವಿಶೇಷ ಪೂಜೆ ಸಲ್ಲಿಸಿ, ಆಶಿರ್ವಾದ ಪಡೆದರು. ಈ ವೇಳೆ ತಂದೆಗೆ ಪುತ್ರ, ಸಂಸದ B.Y. ರಾಘವೇಂದ್ರ ಕುಟುಂಬ ಸದಸ್ಯರು ಸಾಥ್ ನೀಡಿದ್ರು. ಈ ವೇಳೆ ಅಭಿಮಾನಿಗಳಿಂದ B.S. ಯಡಿಯೂರಪ್ಪ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ನನಗೆ ವಿಶೇಷ ಸಂದರ್ಭ. ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ಲೋಕಾರ್ಪಣೆಗೊಳಿಸುವುದು ವಿಶೇಷವಾದ ಘಳಿಗೆಯಾಗಿದೆ. ಮುಂದಿನ ಬಾರಿಯೂ ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಪಣ ತೊಟ್ಟಿದ್ದೇವೆ ಎಂದು ಹೇಳಿದರು.
geetha
Publish Date: Mon, 27 Feb 2023 (17:13 IST)
Updated Date: Mon, 27 Feb 2023 (17:17 IST)