Select Your Language

Notifications

webdunia
webdunia
webdunia
Tuesday, 25 March 2025
webdunia

ರೈತರ ಅಭಿವೃದ್ಧಿಗಾಗಿ BSY ಶ್ರಮಿಸಿದ್ದಾರೆ-ನರೇಂದ್ರ ಮೋದಿ

ರೈತರ ಅಭಿವೃದ್ಧಿಗಾಗಿ BSY ಶ್ರಮಿಸಿದ್ದಾರೆ-ನರೇಂದ್ರ ಮೋದಿ
ಶಿವಮೊಗ್ಗ , ಸೋಮವಾರ, 27 ಫೆಬ್ರವರಿ 2023 (16:10 IST)
ಶಿವಮೊಗ್ಗದಲ್ಲಿ ಏರ್​​ಪೋರ್ಟ್​​ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಕನ್ನಡದಲ್ಲೇ ಭಾಷಣ ಆರಂಭಿಸಿದ್ರು. ಕರ್ನಾಟಕದ ಸಹೋದರ, ಸಹೋದರಿಯರಿಗೆ ನಮಸ್ಕಾರ ಎಂದು ಭಾಷಣ ಆರಂಭಿಸಿದ ಮೋದಿ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದ್ರು. ಸಂಪ್ರದಾಯ ಮತ್ತು ತಂತ್ರಜ್ಞಾನದ ಸಮ್ಮಿಲನವಾಗಿದೆ. ಜಯ ಹೇ ಕರ್ನಾಟಕ ಮಾತೆ ಎಂದು ಪ್ರಧಾನಿ ಹೇಳಿದ್ರು. ಬಳಿಕ ಮಾಜಿ ಸಿಎಂ B.S ಯಡಿಯೂರಪ್ಪರವರ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಯಡಿಯೂರಪ್ಪ ಜನಪ್ರಿಯ ನಾಯಕ. BSY ದೀರ್ಘಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದ್ರು. ರೈತರ ಅಭಿವೃದ್ಧಿಗಾಗಿ BSY ಶ್ರಮಿಸಿದ್ದಾರೆ. ಏರ್‌ಪೋರ್ಟ್‌ ಮಲೆನಾಡಿಗರ ಕನಸಾಗಿತ್ತು. ಶಿವಮೊಗ್ಗ ಜನರ ಕನಸು ಈಗ ನನಸಾಗಿದೆ. ಇದು ಕೇವಲ ಏರ್‌ಪೋರ್ಟ್‌ ಅಲ್ಲ, ಯುವಕರ ಕನಸು. ಏರ್‌ಪೋರ್ಟ್‌ ಭವ್ಯವಾಗಿದೆ, ಸುಂದರವಾಗಿದೆ ಎಂದು ಮೋದಿ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಡಬಲ್​​ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ-ಪ್ರಧಾನಿ ನರೇಂದ್ರ ಮೋದಿ