Publish Date: Mon, 27 Feb 2023 (17:10 IST)
Updated Date: Mon, 27 Feb 2023 (17:13 IST)
ಶಿವಮೊಗ್ಗ ನಿಲ್ದಾಣವು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ರಾಜ್ಯದ 2ನೇ ಅತಿದೊಡ್ಡ ರನ್ ವೇ ಹೊಂದಿರುವ ಖ್ಯಾತಿಗೆ ಒಳಪಟ್ಟಿದೆ. 3,200 ಮೀಟರ್ ಉದ್ದದ ರನ್ ವೇ ಇರುವ ಏರ್‌ಪೋರ್ಟ್ ಇದಾಗಿದ್ದು, 600 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 775 ಎಕರೆ ಪ್ರದೇಶದಲ್ಲಿರುವ ವಿಮಾನ ನಿಲ್ದಾಣವು ಕಮಲದ ಆಕೃತಿಯಲ್ಲಿ ನಿರ್ಮಾಣವಾಗಿದ್ದು, ನೋಡುಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಜನರಿಗೆ ಹೆಚ್ಚು ಅನುಕೂಲವಾಗುವಂತೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು 1 ಕಿಲೋ ಮೀಟರ್ ರಸ್ತೆ ಸಂಪರ್ಕವನ್ನು ನಿರ್ಮಾಣ ಮಾಡಲಾಗಿದೆ.