Select Your Language

Notifications

webdunia
webdunia
webdunia
webdunia

ಮೋದಿಗೆ ಶ್ರೀಗಂಧದ ಗಿಫ್ಟ್ ಸಲ್ಲಿಕೆ

Sandalwood gift submission to Modi
Shivamogga , ಸೋಮವಾರ, 27 ಫೆಬ್ರವರಿ 2023 (16:33 IST)
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದು, ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀಗಂಧದ ಮೊಮೆಂಟೋ ಜೊತೆಗೆ ಅಡಕೆ ಹಾಳೆಯಲ್ಲಿ ಮಾಡಿರುವ ಪೇಟ ಹಾಗೂ ಅಡಕೆಯಲ್ಲಿ ಮಾಡಿರುವ ಹಾರ ಹಾಕಿ ಸನ್ಮಾನಿಸಲಾಯಿತು. ವಿಮಾನ ನಿಲ್ದಾಣ ಉದ್ಘಾಟನೆ ಬಳಿಕ ಪ್ರಧಾನಿಗೆ ಶಿವಮೊಗ್ಗ ಜನತೆಯ ಪರವಾಗಿ ವಿಶೇಷ ಉಡುಗೊರೆಯನ್ನು ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿಗೆ ಶ್ರೀಗಂಧದ ಗಿಫ್ಟ್ ಸಲ್ಲಿಸುವ ಮೂಲಕ ಗೌರವವನ್ನು ನೀಡಲಾಯಿತು. ಈ ಶ್ರೀಗಂಧದ ಗಿಫ್ಟ್ ಅನ್ನು ವಿಮಾನ ನಿಲ್ದಾಣದ ಟರ್ಮಿನಲ್ ಮಾದರಿಯನ್ನೇ ಹೋಲುವ ರೀತಿ ಸಾಗರದ ಕಲಾವಿದರು ವಿಶಿಷ್ಟವಾಗಿ ನಿರ್ಮಾಣ ಮಾಡಿದ್ದಾರೆ. ಈ ಗಿಫ್ಟ್​ನ್ನು ಮೊಮೆಂಟೋದ ಬೇಸ್ ಬೀಟೆ, ಶಿವನೆ ಮರ ಹಾಗೂ ಶ್ರೀಗಂಧದಲ್ಲಿ ನಿರ್ಮಿಸಲಾಗಿದೆ. ಇದುವರೆಗೂ ಯಾರೂ ನೀಡದ ವಿನೂತನ ಉಡುಗೊರೆಯನ್ನು ಪಿಎಂ ಮೋದಿಗೆ ನೀಡಿ ಗೌರವ ಸಲ್ಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನನ್ನ ಪಾಲಿನ ಸಾರ್ಥಕವಾದ ದಿನ-ಮಾಜಿ ಸಿಎಂ B.S. ಯಡಿಯೂರಪ್ಪ