ರಾಜ್ಯದಲ್ಲಿ ಉಪ ಚುನಾವಣೆಗೆ ದಿನಗಣನೆ ಶುರುವಾಗುತ್ತಿರೋ ಹೊತ್ತಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಹೊಸ ತಂತ್ರಕ್ಕೆ ಮೊರೆ ಹೋಗಿದ್ದಾರೆ.
									
										
								
																	
ಬರಲಿರೋ ಉಪಚುನಾವಣೆಗಳಲ್ಲಿ ಅನರ್ಹ ಶಾಸಕರನ್ನು ಹೇಗಾದರೂ ಮಾಡಿ ಗೆಲ್ಲಿಸಿಕೊಂಡು ಬರೋದರ ಮೂಲಕ ಸರಕಾರಕ್ಕೆ ಭದ್ರ ಅಡಿಪಾಯ ಹಾಕೋಕೆ ಸ್ಕೆಚ್ ರೆಡಿ ಮಾಡಿದ್ದಾರೆ.
									
			
			 
 			
 
 			
			                     
							
							
			        							
								
																	ಚುನಾವಣೆ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಹೀಗಾಗಿ ಈಗಿನಿಂದಲೇ ಅನರ್ಹ ಶಾಸಕರ ಕ್ಷೇತ್ರಗಳಿಗೆ ಭೇಟಿ ನೀಡೋದು. ಅಷ್ಟೇ ಅಲ್ಲ ಅನುದಾನ ಬಿಡುಗಡೆ, ಶಂಕುಸ್ಥಾಪನೆ ಮಾಡೋದು ಬಿಎಸ್ ವೈ ಹೊಸ ಲೆಕ್ಕಾಚಾರವಾಗಿದೆ ಎನ್ನಲಾಗಿದೆ. 
									
										
								
																	ಅನರ್ಹರ ಪರ ಸಿಎಂ ಅಧಿಕೃತವಾಗಿ ಅಖಾಡಕ್ಕೆ ಇಳಿಯಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.