Select Your Language

Notifications

webdunia
webdunia
webdunia
webdunia

ಜೂನ್ 2 ರಿಂದ ಬಿ ಪಿ ಎಲ್ ಅಪ್ಲಿಕೇಶನ್ ಓಪನ್

ಜೂನ್ 2 ರಿಂದ ಬಿ ಪಿ ಎಲ್ ಅಪ್ಲಿಕೇಶನ್ ಓಪನ್
bangalore , ಶುಕ್ರವಾರ, 26 ಮೇ 2023 (18:30 IST)
ರಾಜ್ಯದಾದ್ಯಂತ ಬಿಪಿಎಲ್ ಕಾರ್ಡ್ ಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಜನ ಸೈಬರ್ ಸೆಂಟರ್ ಗಳತ್ತ ಮುಖ ಮಾಡುತ್ತಿದ್ದಾರೆ, ಆದ್ರೆ ಬಿಬಿಎಲ್ ಅಪ್ಲಿಕೇಶನ್ ಕ್ಲೋಸ್ ಆಗಿದೆ .ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಜನ‌ ಸೈಬರ್ ಸೆಂಟರ್ ಗಳತ್ತ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ,  ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ್ದ ಐದು ಗ್ಯಾರಂಟಿಗಳ ಲಾಭವನ್ನ ಪಡೆಯಲು ಜನ ಉತ್ಸುಕರಾಗಿದ್ದಾರೆ. ಇದೀಗಾ ಜನ 
ಬಿಪಿಎಲ್ ಕಾರ್ಡ್ ಮಾಡಿಸಲು ಸೈಬರ್ ಸೆಂಟರ್ ಗಳಲ್ಲಿ ಮುಗಿಬೀಳುತಿದ್ದಾರೆ.

ನಿತ್ಯ ೨೦ ರಿಂದ ೩೦ ಜನ ಒಂದೊಂದು ಸೈಬರ್ ಸೆಂಟರ್ ಗಳಿಗೆ ಅರ್ಜಿ ಹಾಕಲು ಬರ್ತಿದ್ದಾರೆ. ಹೊಸ ಕಾರ್ಡ್ ಮಾಡಿಸಲು ಜನ ಬೆಂಗಳೂರು ಒನ್ ಹಾಗೂ ಸೈಬರ್ ಸೆಂಟರ್ಗೆ ಧಾವಿಸುತ್ತಿದ್ದಾರೆ. ಆದ್ರೆ, ಸರ್ಕಾರದಿಂದ ಹೊಸ ರೇಷನ್ ಕಾಡ್೯ಗೆ ಅರ್ಜಿ ಸಲ್ಲಿಸಲು ಇನ್ನು ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ವಾಪಾಸ್ ಮರಳುತ್ತಿದ್ದಾರೆ. ಇನ್ನೂ ಕೆಲವು ಸೈಬರ್ ಸೆಂಟರ್ ಮಾಲೀಕರು ಕೂಡ ಹೊಸ ಅರ್ಜಿಗಳಿಗೆ ಅವಕಾಶ ನೀಡಿದೆಯೋನೋ ಅಂತ ಇಲಾಖಾ ವೆಬ್ ಸೈಟ್ ಓಪನ್ ಮಾಡಿ ಪರಿಶೀಲಿಸ್ತಿದ್ದಾರೆ.

ಹೀಗಾಗಿ ಸೈಬರ್ ಸೆಂಟರ್ ಗಳಲ್ಲಿ ಸೈಬರ್ ಸ್ಲೋ ಪ್ರಾಬ್ಲಂ ಶುರುವಾಗಿದೆ. ಬಿಪಿಎಲ್ ಕಾರ್ಡ್ ಮಾಡಿಸಲು ಇಷ್ಟು ದಿನ ಗ್ರಾಮೀಣ ಭಾಗಗಳಲ್ಲಿ ಜನ ಮುಗಿಬಿದ್ದಿದ್ರು.‌ ಇದೀಗಾ ಬೆಂಗಳೂರಿನಲ್ಲೂ ಈ ಪರಿಸ್ಥಿತಿ ನಿರ್ಮಾಣವಾಗ್ತಿದೆ.ರಾಜ್ಯ ಸರ್ಕಾರ ತಾವು ನೀಡಿದ ಐದು ಗ್ಯಾರಂಟಿಗಳನ್ನು ಮೊದಲ ದಿನವೇ ಪೂರೈಸುವ ಘೋಷಣೆ ಮಾಡಿದ್ದರಿಂದ ತಮಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪಾಸ್, 10 ಕೆಜಿ ಅಕ್ಕಿ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಹೀಗಾಗಿ ಈ ಯೋಜನೆಗೆ ಅಗತ್ಯವಾಗಿ ಬೇಕಾದ ಬಿಪಿಎಲ್ ಕಾರ್ಡ್ ಬೇಡಿಕೆ ಹೆಚ್ಚಾಗಿದ್ದು, ಆಹಾರ ಇಲಾಖೆ ಕಚೇರಿಗೆ ಮುಗಿಬೀಳುತಿದ್ದಾರೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ವಲಯದಲ್ಲಿ ಬಿ ಪಿ ಎಲ್ ಕಾರ್ಡ್ ಗೆ ಹೆಚ್ಚಿದ ಬೇಡಿಕೆ