Select Your Language

Notifications

webdunia
webdunia
webdunia
webdunia

ಹಾಸನದ ಬೆನ್ನಲ್ಲೇ ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ: ರಾಜ್ಯ ರಾಜಧಾನಿಯಲ್ಲಿ ಹೈಲರ್ಟ್‌

Hoax bomb threat, Capital Bangalore, Police on high alert

Sampriya

ಬೆಂಗಳೂರು , ಸೋಮವಾರ, 16 ಜೂನ್ 2025 (14:45 IST)
Photo Credit X
ಬೆಂಗಳೂರು: ರಾಜ್ಯದಲ್ಲಿ ಹುಸಿಬಾಂಬ್‌ ಬೆದರಿಕೆ ಸಂದೇಶ ಹೆಚ್ಚುತ್ತಿದೆ. ಹಾಸನದ ಮೂರು ಖಾಸಗಿ ಶಾಲೆಗಳಿಗೆ ಇಂದು ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ, ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್ ಸ್ಪೋಟಿಸುವುದಾಗಿ ಇ ಮೇಲ್ ಮೂಲಕ ಬೆದರಿಕೆ ಬಂದಿವೆ.  

ನಗರದ ಕುಂಬಳಗೋಡು, ಕಲಾಸಿಪಾಳ್ಯ ಮತ್ತು ರಾಜರಾಜೇಶ್ವರಿ ನಗರದಲ್ಲಿ ಇರುವ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಸ್ಥಳೀಯ ಪೋಲಿಸರು ತಕ್ಷಣವೇ ಶಾಲೆಗಳಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. 

ಹೈದರಾಬಾದ್​ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಬಾಂಬ್ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಹೈದರಾಬಾದ್‌ನ ಘಟನೆಗೂ ಕರ್ನಾಟಕಕ್ಕೂ ಅದಕ್ಕೂ ಸಂಬಂಧವೇನು ಎನ್ನುವ ಪ್ರಶ್ನೆಗಳು ಈಗ ಹುಟ್ಟುಹಾಕಿದೆ. 

ಸೋಮವಾರ ಮಧ್ಯಾಹ್ನ ಬಾಂಬ್ ಸ್ಫೋಟ ಮಾಡಿ ಕಟ್ಟಡ ಧ್ವಂಸ ಮಾಡುವುದಾಗಿ ಹಾಸನದ ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್‌ ಶಾಲೆಗೆ ಭಾನುವಾರ ರಾತ್ರಿ ಬೆದರಿಕೆ ಸಂದೇಶ ಬಂದಿತ್ತು. ಅದರಂತೆ, ಶಾಲೆಯ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹಾಗೂ ಶ್ವಾನ ದಳ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

Israel-Iran conflict: ಇರಾನ್‌ನಲ್ಲಿ ಮೃತರ ಸಂಖ್ಯೆ 230ಕ್ಕೆ ಏರಿಕೆ: 1,277ಕ್ಕೂ ಅಧಿಕ ಮಂದಿ ಗಾಯ