Select Your Language

Notifications

webdunia
webdunia
webdunia
webdunia

ಅಬ್ಬಾಬ್ಬ ಎಂಥ ಸೆಕೆ: ರಾಜ್ಯ ರಾಜಧಾನಿಯಲ್ಲೂ ಗರಿಷ್ಠ ಉಷ್ಣಾಂಶ ದಾಖಲು

ಅಬ್ಬಾಬ್ಬ ಎಂಥ ಸೆಕೆ: ರಾಜ್ಯ ರಾಜಧಾನಿಯಲ್ಲೂ ಗರಿಷ್ಠ ಉಷ್ಣಾಂಶ ದಾಖಲು

Sampriya

ಬೆಂಗಳೂರು , ಬುಧವಾರ, 2 ಅಕ್ಟೋಬರ್ 2024 (14:25 IST)
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಏರಿಕೆಯಾಗಿದೆ. ಬಿಸಿಲ ಬೇಗೆಗೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ 32 ಡಿ.ಸೆ. ದಾಖಲಾಗಿದ್ದು, ಇದು ವಾಡಿಕೆಗಿಂತ 3.2 ಡಿ.ಸೆ. ಹೆಚ್ಚಿನ ತಾಪಮಾನವಾಗಿದೆ. ಮಳೆ ಕೊರತೆಯಿಂದ ಬೇಗೆಯ ವಾತಾವರಣ ಉಂಟಾಗಿದ್ದು, ಗಾಳಿಯಲ್ಲೂ ನೀರಿನ ತೇವಾಂಶವಿಲ್ಲದೆ ಕೆಲವೆಡೆ ಬಿಸಿ ಗಾಳಿ ಬೀಸಲಾರಂಭಿಸಿವೆ.

ದಾವಣೆಗೆರೆಯಲ್ಲಿ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರದಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಮತ್ತು ರಾಯಚೂರಿನಲ್ಲಿ 34.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಾಗಲಕೋಟೆ ಮತ್ತು ರಾಯಚೂರಿನಲ್ಲಿ 34.1 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗದಲ್ಲಿ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮಳೆ ಕೊರತೆ ಪರಿಣಾಮ ಬೇಸಿಗೆಯ ಆರಂಭದ ಸಮಯದಲ್ಲಿನ ಗರಿಷ್ಠ ತಾಪಮಾನದಂತೆಯೇ ಈಗಲೂ ವಾತಾವರಣ ಇರುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿನ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧೀಜಿ ಹೇಳಿದಂತೆ ಆತ್ಮಸಾಕ್ಷಿಯೇ ನ್ಯಾಯಾಲಯ ಎಂದು ನಂಬಿದ್ದೇನೆ: ಸಿಎಂ ಸಿದ್ದರಾಮಯ್ಯ