ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ಸಿಂಗ್ ಮದುವೆಯು ಸಂಭ್ರಮ ಹಾಗೂ ಅದ್ಧೂರಿಯಾಗಿ
ನೆರವೇರಿದೆ.
ರೋಮ್ ನ ಕೊಮೊ ಸರೋವರ ತೀರದ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೋ ಸಭಾಂಗಣದಲ್ಲಿ ಮದುವೆ ಕೆಲವೇ ಕೆಲವು ಆಮಂತ್ರಿತರ ಸಮ್ಮುಖದಲ್ಲಿ ನಡೆಯಿತು. ವಿವಾಹ ಕಾರ್ಯಕ್ರಮದಲ್ಲಿ ದೀಪಿಕಾ-ರಣವೀರ್ ಸಿಂಗ್ ಕುಟುಂಬಗಳ ಸದಸ್ಯರು, ನಟ ಶಾರುಖ್ ಖಾನ್, ನಿರ್ದೇಶಕಿ ಫರ್ಹಾಖಾನ್, ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಸೇರಿದಂತೆ ಕೆಲವೇ ಜನರು ಉಪಸ್ಥಿತರಿದ್ದರು.
ಬೆಂಗಳೂರು ಹಾಗೂ ಮುಂಬೈನಲ್ಲಿ ಆರತಕ್ಷಣೆ ಕಾರ್ಯಕ್ರಮ ಆಯೋಜಿಸಲಾಗಿದೆ.