Publish Date: Wed, 14 Nov 2018 (09:13 IST)
Updated Date: Wed, 14 Nov 2018 (09:15 IST)
ಮುಂಬೈ: ಶಾರುಖ್ ಖಾನ್ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಮುಖ್ಯಸ್ಥ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕ. ಆದರೆ ತಮ್ಮ ಎದುರಾಳಿ ತಂಡದ ನಾಯಕನಿಗೆ ಶಾರುಖ್ ಭರವಸೆಯೊಂದನ್ನು ಕೊಟ್ಟಿದ್ದಾರೆ. ಅದೇನಂತೀರಾ?
ಶಾರುಖ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಬಾಝೀಗರ್’ ಗೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ರೋಹಿತ್ ಆ ಸಿನಿಮಾ ತನ್ನ ಫೇವರಿಟ್ ಎಂದು ಶಾರುಖ್ ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಶಾರುಖ್ ಮುಂದಿನ ಬಾರಿ ಐಪಿಎಲ್ ಪಂದ್ಯವೊಂದರಲ್ಲಿ ನಿನಗಾಗಿ ಅದೇ ಸಿನಿಮಾದ ಸೂಪರ್ ಹಿಟ್ ಹಾಡು ‘ಖಾಲಿ ಖಾಲಿ ಆಂಕೇ’ಗೆ ಲೈವ್ ಆಗಿ ನೃತ್ಯ ಮಾಡುವುದಾಗಿ ಪ್ರಾಮಿಸ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.