Select Your Language

Notifications

webdunia
webdunia
webdunia
webdunia

ಭಾರತ-ವೆಸ್ಟ್ ಇಂಡೀಸ್ ಟಿ20: ಐಪಿಎಲ್ ನಂತೆ ಆಡಿದ ಟೀಂ ಇಂಡಿಯಾ

ಭಾರತ-ವೆಸ್ಟ್ ಇಂಡೀಸ್ ಟಿ20: ಐಪಿಎಲ್ ನಂತೆ ಆಡಿದ ಟೀಂ ಇಂಡಿಯಾ
ಚೆನ್ನೈ , ಸೋಮವಾರ, 12 ನವೆಂಬರ್ 2018 (08:46 IST)
ಚೆನ್ನೈ: ಸಾಮಾನ್ಯವಾಗಿ ಐಪಿಎಲ್ ಕ್ರಿಕೆಟ್ ನಲ್ಲಿ ಈ ರೀತಿ ಆಗುತ್ತದೆ. ಆರಂಭದಲ್ಲಿ ತರಗೆಲೆಯಂತೆ ವಿಕೆಟ್ ಉದುರಿದರೂ ಅಂತಿಮ ಹಂತದಲ್ಲಿ ಅದೇ ತಂಡ ಗೆಲ್ಲುತ್ತದೆ. ಇದೀಗ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಅಂತಿಮ ಟಿ20 ಪಂದ್ಯದಲ್ಲೂ ಅದೇ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 183 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆಂಬತ್ತಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ನಾಯಕ ರೋಹಿತ್ ಶರ್ಮಾ 4 ರನ್, ಕೆಎಲ್ ರಾಹುಲ್ 17 ರನ್ ಗೆ ವಿಕೆಟ್ ಒಪ್ಪಿಸಿದಾಗ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮೂಡಿತ್ತು. ಆದರೆ ಇದುವರೆಗೆ ಫಾರ್ಮ್ ಕಳೆದುಕೊಂಡು ಹೆಣಗಾಡುತ್ತಿದ್ದ ಶಿಖರ್ ಧವನ್ ಈ ಪಂದ್ಯದಲ್ಲಿ ಇದ್ದಕ್ಕಿದ್ದಂತೆ ಸ್ಪೋಟಿಸಿದ್ದು, 62 ಎಸೆತಗಳಲ್ಲಿ 92 ರನ್ ಬಾರಿಸಿ ಗೆಲುವಿನ ರೂವಾರಿಯಾದರು. ಅವರ ಜತೆಗೆ ಯುವ ರಿಷಬ್ ಪಂತ್ 38 ಎಸೆತಗಳಲ್ಲಿ 58 ರನ್ ಬಾರಿಸಿ ಸಾಥ್ ನೀಡಿದರು. ಆದರೆ ಕೊನೆಯ ಬಾಲ್ ನವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ರನ್ ಟೈ ಆಗಿದ್ದಾಗ ಧವನ್ ಔಟಾದರು. ಆದರೆ ಅದೃಷ್ಟವಶಾತ್ ಒಂದು ಎಸೆತ ಬಾಕಿಯಿತ್ತು. ಈ ಸಂದರ್ಭದಲ್ಲಿ ಬಂದ ಮನೀಶ್ ಪಾಂಡೆ ಒಂಟಿ ರನ್ ಗಳಿಸಿ ಗೆಲುವು ಖಚಿತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ರ ಈ ಒಂದು ದಾಖಲೆ ಮುರಿಯಬೇಡ! ಕೊಹ್ಲಿಗೆ ಮನವಿ ಮಾಡಿದ ಸೆಹ್ವಾಗ್!