Publish Date: Sat, 10 Nov 2018 (08:52 IST)
Updated Date: Sat, 10 Nov 2018 (08:54 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರ ಬಳಿ ಭಾರತ ಬಿಟ್ಟು ತೊಲಗಿ ಎಂದು ಹೇಳಿದ್ದು ಇದೀಗ ಅವರ ಬುಡಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.
ಕ್ರಿಕೆಟಿಗನ ಹೇಳಿಕೆ ಬಗ್ಗೆ ಇದೀಗ ಪರ ವಿರೋಧ ಚರ್ಚೆಗಳು ಜೋರಾಗುತ್ತಿವೆ. ಕೊಹ್ಲಿ ಹೊಸದೊಂದು ಆಪ್ ಲಾಂಚ್ ಮಾಡುವ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗರನ್ನು ಇಷ್ಟಪಡಲ್ಲ ಎಂದಿದ್ದ ಅಭಿಮಾನಿಗೆ ಹಾಗಿದ್ದರೆ ನೀವು ಭಾರತದಲ್ಲಿ ವಾಸಿಸಲು ಲಾಯಕ್ಕಿಲ್ಲ ಎಂದಿದ್ದರು.
ಈ ಕಾಮೆಂಟ್ ಬಗ್ಗೆ ಕೆಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಪರ ವಿರೋಧ ಚರ್ಚೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಕೊಹ್ಲಿಯ ಕಾಮೆಂಟ್ ಬಿಸಿಸಿಐ ಕಣ್ಣು ಕೆಂಪಗಾಗಿಸಿದೆ ಎನ್ನಲಾಗಿದೆ. ಸುಪ್ರೀಂಕೋರ್ಟ್ ನಿಯಮಿತ ಬಿಸಿಸಿಐ ಆಡಳಿತ ಮಂಡಳಿ ಕೊಹ್ಲಿಯ ಕಾಮೆಂಟ್ ಬಗ್ಗೆ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೊಹ್ಲಿಯಿಂದ ವಿವರಣೆ ಪಡೆಯಬೇಕೇ ಎನ್ನುವುದರ ಬಗ್ಗೆ ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.