Select Your Language

Notifications

webdunia
webdunia
webdunia
webdunia

ಟೆಸ್ಟ್ ಆಡಲು ಟಿ20 ಕೈ ಬಿಡ್ತಾರಾ ರೋಹಿತ್ ಶರ್ಮಾ?!

ಟೆಸ್ಟ್ ಆಡಲು ಟಿ20 ಕೈ ಬಿಡ್ತಾರಾ ರೋಹಿತ್ ಶರ್ಮಾ?!
ಮುಂಬೈ , ಮಂಗಳವಾರ, 13 ನವೆಂಬರ್ 2018 (09:31 IST)
ಮುಂಬೈ: ಅಪರೂಪಕ್ಕೆ ಟೆಸ್ಟ್ ಆಡಲು ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಳ್ಳಲು ಕ್ರಿಕೆಟಿಗ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯವನ್ನೇ ಕೈ ಬಿಡಲು ನಿರ್ಧರಿಸಿದಂತಿದೆ.

ನವಂಬರ್ 21 ರಿಂದ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಆದರೆ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಅವಕಾಶ ಪಡೆದಿರುವ ರೋಹಿತ್ ಈ ಸರಣಿಗೆ ಸಜ್ಜಾಗಲು ಭಾರತ ಎ ತಂಡದ ಪರ ಟೆಸ್ಟ್ ಆಡಲಿದ್ದಾರೆ.

ನ್ಯುಜಿಲೆಂಡ್ ವಿರುದ್ಧ ನ.16 ರಿಂದ 19 ರವರೆಗೆ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರಷ್ಟೇ ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಗೆ ಅವಕಾಶ ಸಿಗಲಿದೆ. ಈ ಪಂದ್ಯಗಳ ನಡುವೆ ಕೇವಲ 2 ದಿನಗಳ ಅಂತರವಿದೆಯಷ್ಟೇ. ಹೀಗಾಗಿ ನ್ಯೂಜಿಲೆಂಡ್ ನಿಂದ ಆಸ್ಟ್ರೇಲಿಯಾಗೆ ಬಂದು ಈ ಪಂದ್ಯದಲ್ಲಿ ಆಡುವುದು ರೋಹಿತ್ ಗೆ ಕಷ್ಟವಾಗಲಿದೆ. ಹಾಗಾಗಿ ಬಹುತೇಕ ಟಿ20 ಪಂದ್ಯಕ್ಕೆ ರೋಹಿತ್ ಕೈ ಕೊಡುವ ಸಾಧ್ಯತೆ ಹೆಚ್ಚು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಸರಣಿಗೆ ಮೊದಲು ಮರೆಯಾಯಿತು ಟೀಂ ಇಂಡಿಯಾದ ದೊಡ್ಡ ಚಿಂತೆ!