Select Your Language

Notifications

webdunia
webdunia
webdunia
webdunia

ದೀಪಿಕಾ-ರಣವೀರ್ ಮದುವೆಗೆ ಆಹ್ವಾನ ಪಡೆದ ಸ್ಯಾಂಡಲ್​ವುಡ್ ನ ಖ್ಯಾತ ನಿರ್ದೇಶಕ ಯಾರು ಗೊತ್ತಾ?

ದೀಪಿಕಾ-ರಣವೀರ್ ಮದುವೆಗೆ ಆಹ್ವಾನ ಪಡೆದ ಸ್ಯಾಂಡಲ್​ವುಡ್ ನ ಖ್ಯಾತ ನಿರ್ದೇಶಕ ಯಾರು ಗೊತ್ತಾ?
ಮುಂಬೈ , ಮಂಗಳವಾರ, 13 ನವೆಂಬರ್ 2018 (07:12 IST)
ಮುಂಬೈ : ನವೆಂಬರ್​ 14ರಂದು ನಡೆಯಲಿರುವ ದೀಪಿಕಾ ಪಡುಕೋಣೆ ಹಾಗೂ ರಣ​ವೀರ್​ ಸಿಂಗ್ ಮದುವೆಗೆ ಸ್ಯಾಂಡಲ್​ವುಡ್​ನಿಂದ ನಿರ್ದೇಶಕರೊಬ್ಬರಿಗೆ ಆಹ್ವಾನ ಬಂದಿದೆಯಂತೆ.


ಹೌದು. ನವೆಂಬರ್​ 14ರಂದು ಇಟಲಿಯಲ್ಲಿ ನಡೆಯಲಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಮದುವೆಗೆ ಚಿತ್ರರಂಗದಿಂದ ಕೆಲವೇ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅದರಂತೆ ಸ್ಯಾಂಡಲ್​ವುಡ್ ನ ಖ್ಯಾತ ನಿರ್ದೇಶಕ ಇಂದ್ರಜಿತ್​ ಲಂಕೇಶ್ ​ಗೆ ಆಮಂತ್ರಣ ನೀಡಲಾಗಿದೆಯಂತೆ. ಆದರೆ ಇಂದ್ರಜಿತ್​ಗೆ ಮದುವೆ ಆಮಂತ್ರಣ ಕೇವಲ ವಾಟ್ಸ್​ಪ್​ ಮೂಲಕ ಬಂದಿರುವುದರಿಂದ , ಮದುವೆಗೆ ಹೋಗದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.


2006ರ ಇಂದ್ರಜಿತ್​ ಲಂಕೇಶ್​ ನಿರ್ದೇಶನದ ಐಶ್ವರ್ಯ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಉಪೇಂದ್ರ  ಜೊತೆ ನಟಿಸುವುದರ ಮೂಲಕ ನಟಿ ದೀಪಿಕಾ ಪಡುಕೋಣೆ ಮೊಟ್ಟಮೊದಲ ಬಾರಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಸ್ತಿಪಟು ರೊಬೆಲ್ ಚಾಲೆಂಜ್ ಸ್ವೀಕರಿಸಿ ಸಂಕಟಕ್ಕೆ ಸಿಲುಕಿದ ನಟಿ ರಾಖಿ ಸಾವಂತ್