Publish Date: Sat, 11 May 2019 (13:14 IST)
Updated Date: Sat, 11 May 2019 (13:21 IST)
ಪ್ರಶ್ನೆ: ನನ್ನ ತಂದೆ-ತಾಯಿಗೆ ನಾನೊಬ್ಬಳೇ ಮುದ್ದಿನ ಮಗಳು. ತುಂಬಾ ಚೆನ್ನಾಗಿ, ಮುದ್ದು ಮಾಡಿ ಬೆಳೆಸಿದ್ದಾರೆ ನನ್ನನ್ನು. ಈಗೀಗ ಎಲ್ರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳಿವೆ. ಆದರೆ ನಾನು ಎಷ್ಟೇ ಕೇಳಿದರೂ ಅದರಿಂದ ಸಮಯ ಹಾಳಾಗುತ್ತೆ. ಬೇಡ ಅಂತ ಮನೆಯಲ್ಲಿ ನನಗೆ ಫೋನ್ ಕೊಡಿಸಲೇ ಇಲ್ಲ.
ಆದರೆ ಗೆಳತಿಯರು ದೊಡ್ಡದಾದ ಫೋನ್ ಗಳಲ್ಲಿ ವಾಟ್ಸಾಫ್, ಚಾಟ್, ವಿಡಿಯೋ ಕಾಲಿಂಗ್ ಮಾಡುತ್ತಾ ಲವರ್ ಗಳ ಹರಟೆ ಹೊಡೆಯುತ್ತಿರುವುದನ್ನು ನೋಡಿ ನನಗೂ ಹೊಟ್ಟೆ ಉರಿದುಕೊಳ್ಳುವಂತಾಗಿತ್ತು. ಈ ಬಗ್ಗೆ ನಾನು ಸಲುಗೆ ಬೆಳೆಸಿಕೊಂಡಿದ್ದ ಸ್ಟೋರ್ ವೊಂದರ ಮಾಲೀಕನ ಮಾತಿಗೆ ಬಂದಾಗ ಹೇಳಿಕೊಂಡಿದ್ದೆ.
ನಾಲ್ಕೈದು ದಿನಗಳ ಬಳಿಕ ಆ ಸ್ಟೋರ್ ಮಾಲಿಕ ನನಗಾಗಿ ಐಫೋನ್ ನನ್ನೇ ಖರೀದಿಸಿಕೊಂಡು ತಂದು ಗಿಫ್ಟ್ ಕೊಟ್ಟಿದ್ದ. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಬಳಿಕ ನಿತ್ಯ ಆತನೊಂದಿಗೆ ಚಾಟ್ ಮಾಡುತ್ತಾ ಅವನನ್ನೇ ಪ್ರೀತಿಸಲು ಶುರುಮಾಡಿದ್ದೆ. ಒಂದು ದಿನ ಆತ ಕೊಡಿಸಿದ ಐ ಫೋನ್ ನಲ್ಲೇ ನನಗೆ ನೀಲಿ ಚಿತ್ರ ತೋರಿಸಿ ಅದರಂತೆ ಮಾಡಿದರೆ ಮಜಾ ಇರುತ್ತೆ ಅಂತ ಪುಸಲಾಯಿಸಿದ.
ನಾನು ಅವನಲ್ಲಿ ಕರಗಿ ಹೋದೆ. ಅವನು ಹೇಳಿದಂತೆ ಕೇಳಿ ಬೆಡ್ ನಲ್ಲಿ ಬೋಲ್ಡ್ ಆಗಿರುವೆ. ಹಲವು ಬಾರಿ ಆತ ನನ್ನೊಂದಿಗೆ ಮಲಗಿದ್ದಾನೆ. ನಾನೀಗ ಗರ್ಭಿಣಿಯಾಗಿದ್ದೇನೆ. ಮನೆಯಲ್ಲಿ ಏನು ಹೇಳೋದು ಗೊತ್ತಾಗುತ್ತಿಲ್ಲ.
ಉತ್ತರ: ಕಾಮಕ್ಕೆ ಕಣ್ಣಿಲ್ಲ ಅನ್ನೋದು ಇದಕ್ಕೆ. ನೀವು ಕ್ಷಣಿಕವಾದ ಹಾಗೂ ಕ್ಷುಲ್ಲಕವಾದ ಫೋನ್ ಆಸೆಗೆ ನಿಮ್ಮ ಅಮೂಲ್ಯ ಬಾಳನ್ನು ಹಾಳುಮಾಡಿಕೊಂಡಿದ್ದೀರಿ. ಪೋಷಕರಿಗೆ ವಂಚಿಸಿರುವ ನೀವು ನಿಮ್ಮ ಜೀವನವನ್ನು ನೀವಾಗಿಯೇ ಕಷ್ಟಕ್ಕೆ ತಳ್ಳಿರುವಿರಿ.
ನಿಮ್ಮ ಜತೆ ಸುಖ ಪಟ್ಟು ನಿಮ್ಮನ್ನು ಗರ್ಭಿಣಿಯಾಗಿಸಿದ ಆತನಿಗೆ ಮದುವೆ ಆಗಿದೆಯೋ ಇಲ್ಲವೋ ಎಂಬುದನ್ನು ನೀವು ಬರೆದಿಲ್ಲ. ಆತ ಅವಿವಾಹಿತನಾಗಿದ್ದರೆ ಆತನ ಜತೆ ಮದುವೆಯಾಗಿ ಬಾಳಿಗೊಂಡು ಅರ್ಥ ಕಂಡುಕೊಳ್ಳಿ.