Publish Date: Thu, 05 Jan 2023 (15:37 IST)
Updated Date: Thu, 05 Jan 2023 (15:57 IST)
ಬೆಂಗಳೂರು : ಹೊಸ ವರ್ಷ ಆರಂಭದಲ್ಲಿ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್ ನ್ಯೂಸ್ ಕೊಟ್ಟಿದೆ. ಹೌದು. ಬಿಎಂಟಿಸಿ ವ್ಯಾಪ್ತಿಯನ್ನು ಸರ್ಕಾರ ವಿಸ್ತರಣೆ ಮಾಡಿದೆ.
ಹೀಗಾಗಿ ಇನ್ಮೇಲೆ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿ ಬಸ್ಗಳು ಸಂಚಾರ ಮಾಡಲಿದೆ. ಇಷ್ಟು ದಿನ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಬಸ್ ಸೇವೆ ಸೀಮಿತವಾಗಿತ್ತು.
ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ಇದೀಗ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿ ವ್ಯಾಪ್ತಿ ವಿಸ್ತರಣೆ ಮಾಡಿ ಒಮ್ಮತದ ತೀರ್ಮಾನ ಕೈಗೊಳ್ಳಾಗಿದೆ. ಈ ಮೂಲಕ ಚಿಕ್ಕಬಳ್ಳಾಪುರ ಜನತೆಯ ಬೇಡಿಕೆಗೆ ಸ್ಪಂದಿಸಿ ಬಿಎಂಟಿಸಿ ಬೋರ್ಡ್ ಅನುಮತಿ ನೀಡಿದೆ.