ವಿಜಯಪುರ: ವಿಜಯಪುರದಲ್ಲಿ ಹಲವು ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದರ ಬಗ್ಗೆ ರಾಜ್ಯ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ವಿಜಯಪುರದಲ್ಲಿ ಸಾವಿರಾರು ಎಕರೆಯನ್ನು ವಕ್ಫ್ ತನ್ನ ಆಸ್ತಿ ಎಂದು ಹೇಳಿಕೊಳ್ಳುತ್ತಿದೆ. ಅದರಂತೆ ವಿಜಯಪುರದಲ್ಲೂ ಹಲವು ರೈತರಿಗೆ ಅವರ ಭೂಮಿ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಲಾಗಿದೆ. ಇದನ್ನು ಹಿಂಪಡೆಯದೇ ಇದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ತನ್ನ ರಾಜಕೀಯ ದುರಾಸೆಗೆ ಇಡೀ ರಾಜ್ಯವನ್ನೇ ಕಾಂಗ್ರೆಸ್ ಸರ್ಕಾರ ವಕ್ಫ್ ಆಸ್ತಿ ಮಾಡಲು ಹೊರಟಿದೆ. ರಾಜ್ಯದ ವಕ್ಫ್ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಉದ್ದೇಶಿತ ಭೂಮಿಯನ್ನು ವಕ್ಫ್ ಗೆ ನೊಂದಾಯಿಸಲು ಆದೇಶ ನಿಡುತ್ತಿದರೆ ಅತ್ತ ರೈತರ ಭೂಮಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ ಎಂದು ಸರ್ಕಾರದ ಸಚಿವರೇ ಒಬ್ಬರು ಟ್ವೀಟ್ ಮಾಡಿದ್ದಾರೆ. 4-5 ತಲೆಮಾರಿನಿಂದ ವ್ಯವಸಾಯ ಮಾಡುತ್ತಾ ಬಂದಿರುವ ರೈತರ ಭೂಮಿಯನ್ನು ವಕ್ಫ್ ಆಸ್ತಿ ತನ್ನದು ಎಂದು ಹೇಳಿಕೊಳ್ಳುತ್ತಿದೆ.
ಸರ್ಕಾರ ಮತ್ತು ಸಚಿವರ ಒತ್ತಡದ ಮೇರೆಗೆ ಎಷ್ಟೋ ಜಮೀನುಗಳಿಗೆ ನೋಟಿಸ್ ನೀಡಲಾಗಿದೆ. 2013-14 ರಲ್ಲಿ ದೆಹಲಿಯ 100 ಎಕರೆ ಪ್ರಮುಖ ಜಾಗವನ್ನು ವಕ್ಫ್ ನೀಡಿದಂತೇ ಇಂದೂ ಕಾಂಗ್ರೆಸ್ ರಾಜ್ಯದಲ್ಲಿ ಮಾಡುತ್ತಿದೆ. ಇದಕ್ಕಾಗಿಯೇ ಇಂದು ವಕ್ಫ್ ತಿದ್ದುಪಡಿ ಕಾಯ್ದೆ ಅನಿವಾರ್ಯವಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.