Select Your Language

Notifications

webdunia
webdunia
webdunia
webdunia

ಜೆಡಿಎಸ್ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾದ ಬಿಜೆಪಿ

ಜೆಡಿಎಸ್ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾದ ಬಿಜೆಪಿ
ಹಾಸನ , ಸೋಮವಾರ, 25 ಮಾರ್ಚ್ 2019 (18:20 IST)
ಜೆಡಿಎಸ್ ವಿರುದ್ದ ಶಕ್ತಿ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ತನ್ನ ಅಭ್ಯರ್ಥಿಯ ನಾಮಪತ್ರವನ್ನು ಘಟಾನುಘಟಿ ನಾಯಕರು ಹಾಗೂ ಅಪಾರ ಬೆಂಬಲಿಗರ ಸಾಕ್ಷಿ ನಡುವೆ ಸಲ್ಲಿಕೆ ಮಾಡಲಾಯಿತು.
ಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ  ಅನೇಕ ಮುಖಂಡರು, ಶಾಸಕರು ಸಾಥ್ ನೀಡಿದ್ರು.  

ಹರಿದು ಬಂದ ಜನಸಾಗರ: ಹಾಸನದ ಮಹಾವೀರ ಸರ್ಕಲ್ ನಿಂದ ಅದ್ದೂರಿ ಮೆರವಣಿಗೆ ನಡೆಯಿತು. ಜೆಡಿಎಸ್ ವಿರುದ್ದ ಶಕ್ತಿ ಪ್ರದರ್ಶನಕ್ಕೆ ಮುಂದಾದ ಬಿಜೆಪಿಗೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಮೆರವಣಿಗೆಗೆ ಮೆರಗು‌ ನೀಡಿದ್ರು.

ಎತ್ತಿನ ಗಾಡಿಗಳು, ಸಾಂಸ್ಕೃತಿಕ ಕಲಾ ತಂಡಗಳು, ಮೋದಿ ಮುಖವಾಡ ಧರುಸಿರುವ ಕಾರ್ಯಕರ್ತರು ಹುಮ್ಮಸ್ಸು ತುಂಬಿದ್ರು.
ಮೋದಿ ಮೋದಿ ಎಂದು‌ ಕೇಳಿ ಬಂದ ಜಯಘೋಷ ಎಲ್ಲೆಡೆ ಹವಾ ಸೃಷ್ಟಿ ಮಾಡಿತು. ಹಾಸನ ಬಿ.ಎಂ ರಸ್ತೆಯಲ್ಲಿ ಅದ್ದೂರಿ ಮೆರವಣಿಗೆಗೆ ಸಾಕ್ಷಿಯಾದ ಎ.ಮಂಜು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ತಮ್ಮ ನೆಚ್ಚಿನ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಹಾದಿ ಹಿಡಿದ ಅಭ್ಯರ್ಥಿ ಮಾಡಿದ್ದೇನು?