Select Your Language

Notifications

webdunia
webdunia
webdunia
webdunia

ನೀತಿ ಸಂಹಿತೆ ಉಲ್ಲಂಘನೆ ; ನಾಮಪತ್ರ ಸಲ್ಲಿಸುವ ದಿನವೇ ಪ್ರತಾಪ್ ಸಿಂಹ ವಿರುದ್ಧ ಎಫ್‍.ಐ.ಆರ್ ದಾಖಲು

ನೀತಿ ಸಂಹಿತೆ ಉಲ್ಲಂಘನೆ ; ನಾಮಪತ್ರ ಸಲ್ಲಿಸುವ ದಿನವೇ ಪ್ರತಾಪ್ ಸಿಂಹ ವಿರುದ್ಧ  ಎಫ್‍.ಐ.ಆರ್ ದಾಖಲು
ಮೈಸೂರು , ಸೋಮವಾರ, 25 ಮಾರ್ಚ್ 2019 (11:56 IST)
ಮೈಸೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸುವ ದಿನವೇ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ವಿರುದ್ಧ  ಎಫ್‍.ಐ.ಆರ್ ದಾಖಲು ಮಾಡಲಾಗಿದೆ.


ಪ್ರತಾಪ್ ಸಿಂಹ ಅವರು ಸರ್ಕಾರಿ ಅಂಚೆ ಕಚೇರಿ ಮೂಲಕ ಬುಕ್ ಲೆಟ್‍ ಗಳನ್ನ ಹಂಚಿದ್ದಾರೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‍ಓಯು) ವ್ಯವಸ್ಥಾಪನಾ ಮಂಡಳಿ ಮಾಜಿ ಸದಸ್ಯರಾದ ಕೆ ಎಸ್.ಶಿವರಾಮ್ ಎನ್ನುವವರು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು.


ಬಳಿಕ ದೂರಿನ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಫ್ಲೈಯಿಂಗ್ ಸ್ಕ್ವಾಡ್ ಸಹಾಯಕ ಚುನಾವಣಾಧಿಕಾರಿ ಉಮೇಶ್ ಅವರು ದೂರು ನೀಡಿದ್ದು, ಮಾರ್ಚ್ 23 ರಂದು ಎಫ್‍ಐಆರ್ ದಾಖಲು ಮಾಡಲಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಅಲೆ ಎಲ್ಲೆಡೆ ಇದೆ ಎಂದ ಕೈ ನಾಯಕ