Publish Date: Mon, 25 Mar 2019 (11:25 IST)
Updated Date: Mon, 25 Mar 2019 (11:26 IST)
ಎಲ್ಲಡೆ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಇದೆ. ಹೀಗಾಗಿ ಕೈ ಪಾಳೆಯದವರು ಗೆಲ್ಲುವುದು ಕಷ್ಟ. ಹೀಗಂತ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಪೂಜಾರಿ ಅವರನ್ನು ಭೇಟಿ ಮಾಡಿ ನಳಿನ್ ಕುಮಾರ್ ಕಟೀಲ್ ಆಶೀರ್ವಾದ ಪಡೆದರು. ಜನಾರ್ಧನ ಪೂಜಾರಿ ಭೇಟಿ ಮಾಡಿ 10 ನಿಮಿಷಗಳ ಕಾಲ ಮಾತುಕತೆ ಮಾಡಿದರು.
ಮಂಗಳೂರುನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜಕೀಯ ವಲಯದಲ್ಲಿ ಪೂಜಾರಿ ಹಾಗೂ ನಳಿನ್ ಕುಮಾರ್ ಭೇಟಿ ತೀವ್ರ ಕೂತಹಲ ಕೆರಳಿಸಿದೆ. ಎಲ್ಲಡೆ ನರೇಂದ್ರ ಮೋದಿ ಅಲೆ ಇದೆ. ಹೀಗಾಗಿ ಕರಾವಳಿಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಕೇಂದ್ರ ಸಚಿವರೂ ಆಗಿರುವ ಜನಾರ್ಧನ್ ಪೂಜಾರಿ ಹೊಸ ದಾಳ ಎಸೆದರು.
Jagadeesh
Publish Date: Mon, 25 Mar 2019 (11:25 IST)
Updated Date: Mon, 25 Mar 2019 (11:26 IST)