Select Your Language

Notifications

webdunia
webdunia
webdunia
webdunia

ಸಿಎಂ ಕುಮಾರಸ್ವಾಮಿ ದೊಡ್ಡ ಡ್ರಾಮಾ ಕಲಾವಿದ ಎಂದು ಬಿಜೆಪಿ ವ್ಯಂಗ್ಯ

ಸಿಎಂ ಕುಮಾರಸ್ವಾಮಿ ದೊಡ್ಡ ಡ್ರಾಮಾ ಕಲಾವಿದ ಎಂದು ಬಿಜೆಪಿ ವ್ಯಂಗ್ಯ
ಬೆಂಗಳೂರು , ಸೋಮವಾರ, 16 ಜುಲೈ 2018 (09:32 IST)
ಬೆಂಗಳೂರು: ಸಾರ್ವಜನಿಕವಾಗಿ ನಾನು ಸಂತೋಷವಾಗಿಲ್ಲ ಎಂದು ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ ಬಗ್ಗೆ ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕೆಎಸ್ ಈಶ್ವರಪ್ಪ ‘ಹಿಂದೆ ದೇವೇಗೌಡರಿಗೂ ಇದೇ ರೀತಿ ಕಣ್ಣೀರು ಹಾಕುವ ಚಾಳಿ ಇತ್ತು. ಈಗ ಕುಮಾರಸ್ವಾಮಿಯವರೂ ಇದನ್ನೇ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

ಇನ್ನೊಂದೆಡೆ ರಾಜ್ಯ ಬಿಜೆಪಿ ಘಟಕ ತನ್ನ ಟ್ವಿಟರ್ ಪೇಜ್ ನಲ್ಲಿ ಸಿಎಂ ಕುಮಾರಸ್ವಾಮಿ ದೊಡ್ಡ ಡ್ರಾಮಾ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ. ನಮ್ಮ ದೇಶದಲ್ಲಿ ತಮ್ಮ ಅಭಿನಯದ ಮೂಲಕ ಅದ್ಭುತಗಳನ್ನೇ ಸೃಷ್ಟಿಸಿದ ಹಲವಾರು ದಿಗ್ಗಜ ಕಲಾವಿದರಿದ್ದಾರೆ. ಅವರಲ್ಲಿ ಹೊಸ ಸೇರ್ಪಡೆ ಕುಮಾರಸ್ವಾಮಿ. ತನ್ನ ನಟನೆಯಿಂದಲೇ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ’ ಎಂದು ಬಿಜೆಪಿ ಘಟಕ ವ್ಯಂಗ್ಯವಾಗಿ ಬರೆದುಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿಗೆ ‘ಗೆಳೆಯ’ ಡಿಸಿಎಂ ಪರಮೇಶ್ವರ್ ಸಾಂತ್ವನಿಸಿದ್ದು ಹೀಗೆ!