Publish Date: Mon, 16 Jul 2018 (09:29 IST)
Updated Date: Mon, 16 Jul 2018 (09:30 IST)
ಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದರೂ ಸಂತೋಷವಾಗಿಲ್ಲ ಎನ್ನುತ್ತಾ ಸಾರ್ವಜನಿಕವಾಗಿ ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ ನೆರವಿಗೆ ಡಿಸಿಎಂ ಪರಮೇಶ್ವರ್ ಬಂದಿದ್ದಾರೆ.
ಕುಮಾರಸ್ವಾಮಿಯವರ ಭಾವುಕ ಮಾತುಗಳ ಬಗ್ಗೆ ಮಾಧ್ಯಮಗಳು ಡಿಸಿಎಂ ಪರಮೇಶ್ವರ್ ರನ್ನು ಪ್ರಶ್ನಿಸಿದಾಗ ಅವರು ತಮ್ಮ ಮಿತ್ರನಿಗೆ ಸಾಂತ್ವನ ಹೇಳುವಂತಹ ಮಾತನಾಡಿದ್ದಾರೆ.
‘ಅವರು ಸುಗಮವಾಗಿ ಕೆಲಸ ಮಾಡುವಂತಹ ವಾತಾವರಣ ನಿರ್ಮಿಸುತ್ತೇವೆ. ಅವರು ಸಂತೋಷವಾಗಿದ್ದರೆ ನಾವೂ ಸಂತೋಷವಾಗಿರುತ್ತೇವೆ. ಕಣ್ಣೀರು ಹಾಕೋದೆಲ್ಲಾ ಬೇಡ’ ಎಂದು ಡಿಸಿಎಂ ಮುಗುಳ್ನಗುತ್ತಲೇ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಾಂತ್ವನ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.