Publish Date: Mon, 16 Jul 2018 (09:24 IST)
Updated Date: Mon, 16 Jul 2018 (09:26 IST)
ಬೆಂಗಳೂರು: ಮೊನ್ನೆಯಷ್ಟೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಕಣ್ಣೀರು ಹಾಕುತ್ತಾ, ನಾನು ಸಂತೋಷವಾಗಿಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿ ಕಣ್ಣೀರಿನ ಹಿಂದಿನ ನಿಜ ಕಾರಣ ಏನಿರಬಹುದು?
ಸದ್ಯಕ್ಕೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಹಲವು ಸಮಸ್ಯೆಗಳು ಕುಮಾರಸ್ವಾಮಿ ಮುಂದಿದೆ. ಸಾಲಮನ್ನಾ ಘೋಷಣೆ ಮಾಡಿದ ಬಳಿಕ ಅದನ್ನು ಸರಿದೂಗಿಸುವುದೇ ದೊಡ್ಡ ತಲೆನೋವಾಗಿದೆ. ಹಣ ಹೊಂದಿಸುವುದೇ ಕುಮಾರಸ್ವಾಮಿ ಎದುರಿರುವ ದೊಡ್ಡ ಸವಾಲು.
ಅದರ ಜತೆಗೆ ಮಿತ್ರ ಪಕ್ಷ ಕಾಂಗ್ರೆಸ್ ನಾಯಕರೇ ಬಜೆಟ್ ನ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಕುಮಾರಸ್ವಾಮಿಗೆ ತಲೆನೋವಾಗಿದೆ. ಹೀಗಾಗಿ ಸಿಎಂ ಆದರೂ ಅಧಿಕಾರವಿಲ್ಲದ ಸ್ಥಿತಿ ಕುಮಾರಸ್ವಾಮಿಯವರದ್ದಾಗಿದೆ. ಇದೇ ಅಸಹಾಯಕತೆಯೇ ಅವರನ್ನು ಕಣ್ಣೀರು ಹಾಕುವಂತೆ ಮಾಡಿತಾ ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.