Select Your Language

Notifications

webdunia
webdunia
webdunia
webdunia

ಬಿಜೆಪಿ ರಾಜ್ಯಾಧ್ಯಕ್ಷೆ ಆಗ್ತಾರಾ ಶೋಭಾ ಕರಂದ್ಲಾಜೆ…?

ಬಿಜೆಪಿ ರಾಜ್ಯಾಧ್ಯಕ್ಷೆ ಆಗ್ತಾರಾ ಶೋಭಾ  ಕರಂದ್ಲಾಜೆ…?
bangalore , ಮಂಗಳವಾರ, 24 ಅಕ್ಟೋಬರ್ 2023 (11:00 IST)
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಬಿದ್ದಿದೆ. ಇದರ ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದು ಹೋದರೂ, ವಿಪಕ್ಷ ನಾಯಕನ ಆಯ್ಕೆ ಮಾಡೋದಕ್ಕೂ ಬಿಜೆಪಿಗೆ ಸಾಧ್ಯವಾಗಿಲ್ಲ. ಡೆಲ್ಲಿಯ ವರಿಷ್ಠರಿಗೂ ಕೂಡ ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ, ಅನ್ನೋದರ ಬಗ್ಗೆ ಗಮನ ಹರಿಸುವಷ್ಟು ಸಂಯಮ ಇದ್ದಂತೆ ಕಾಣ್ತಿಲ್ಲ. ಇನ್ನೇನು ಲೋಕಸಭಾ ಚುನಾವಣಾ ಸಮೀಪವಾಗ್ತಿದೆ. ಹೀಗಿದ್ದರೂ ಕೂಡ, ನಳೀನ್‌ಕುಮಾರ್ ಕಟೀಲ್ ಅವರ ಅಧ್ಯಕ್ಷ ಅವಧಿಯೂ, ಮುಗಿದು ಹೋದರೂ, ಕೂಡ ಸಮರ್ಥವಾದ ಹೊಸ ಸಾರಥಿಯನ್ನು ತಂದು ಕೂರಿಸುವ ಗೋಜಿಗೆ ಹೋಗಿಲ್ಲ. ಹಾಗಾದರೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಇದೆ ಅನ್ನೋದನ್ನೆ ಮರೆತರಾ ಡೆಲ್ಲಿಯ ಬಿಜೆಪಿ ವರಿಷ್ಠರು ಅನ್ನುವ ಮಾತು ಜೋರಾಗಿಯೇ ಸದ್ದು ಮಾಡ್ತಿದೆ.
 
ಆದರೆ ಇವಾಗ ಬಿಜೆಪಿಗೆ ಹೊಸ ಸಾರಥಿ ನೇಮಕವಾಗುವ ಬಗ್ಗೆ ಸುದ್ದಿ ಬಂದಿದೆ. ಹಲವು ಹೆಸರುಗಳು ಬಿಜೆಪಿ ರಾಜ್ಯ ಅಧ್ಯಕ್ಷರ ಹುದ್ದೆಗೆ ಕೇಳಿ ಬಂದರೂ, ಅಂತಿಮವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರೇ ಫೈನಲ್ ಆಗಿದೆ ಅನ್ನುವ ಟಾಕ್ ಕೇಳಿ ಬಂದಿದೆ. ಅಲ್ಲಿಗೆ ರಾಷ್ಟç ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬರೋದು ಪಕ್ಕನಾ..? ಮೋದಿ ಮತ್ತು ಅಮಿತ್‌ಶಾ ಅವರ ಮೈಂಡ್‌ನಲ್ಲಿ ಇರೋದು ಶೋಭಾ ಅವರ ಹೆಸರೇನಾ..? ಅಥವಾ ಕೊನೆಯ ಗಳಿಗೆಯಲ್ಲಿ ಇನ್ನೊಂದು ಹೆಸರು ತಳಕು ಹಾಕಬಹುದಾ..? ಬಟ್ ನಾಟ್‌ಶ್ಯೂರ್..!?

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮೋಸ್ಟ್ ವಾಂಟೆಡ್ ಉಗ್ರ ಫಿನಿಶ್ ಆದ್ನಾ..?