Select Your Language

Notifications

webdunia
webdunia
webdunia
webdunia

ಚೆನ್ನಮ್ಮ ಕುರಿತಾದ 3 ಮನವಿ ಮಾಡ್ತಿದ್ದೇನೆ

ಚೆನ್ನಮ್ಮ ಕುರಿತಾದ 3 ಮನವಿ ಮಾಡ್ತಿದ್ದೇನೆ
bangalore , ಸೋಮವಾರ, 23 ಅಕ್ಟೋಬರ್ 2023 (20:41 IST)
ಸಿಎಂಗೆ ಕಿತ್ತೂರು ರಾಣಿ ಚೆನ್ನಮ್ಮ ಕುರಿತಾದ 3 ಮನವಿ ಮಾಡ್ತಿದ್ದೇನೆ. ಮಹಾರಾಷ್ಟ್ರದ ಪುಣೆಯಲ್ಲಿರುವ ರಾಣಿ ಚೆನ್ನಮ್ಮ ದಾಖಲೆಗಳು ಹಾಗೂ ಮ್ಯೂಸಿಯಂನಲ್ಲಿರುವ ಖಡ್ಗವನ್ನು ನಮ್ಮ ರಾಜ್ಯಕ್ಕೆ ವಾಪಸ್ ತರಬೇಕು.ಈ ಕುರಿತು ಸಿಎಂ ಸಿದ್ದರಾಮಯ್ಯ ಕೇಂದ್ರದ ಗಮನಕ್ಕೆ ತರಬೇಕು ಎಂದು ಬೆಂಗಳೂರಿನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಪ್ರಯುಕ್ತ ಟೌನ್ ಹಾಲ್ ಸಮೀಪ ಇರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದ್ದಾರೆ.

ಈ ವೇಳೆ ಸಚಿವ ಎಂಸಿ ಸುಧಾಕರ್, ಶಾಸಕ ವಿನಯ್ ಕುಲಕರ್ಣಿ, ಜಯಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ,ಸಿಎಂ ಸಿದ್ದರಾಮಯ್ಯ ಅವರ ಬಳಿ ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ ಮೂರು ಮನವಿಗಳನ್ನ ಮಾಡ್ತಿದ್ದೇನೆ. ಮಹಾರಾಷ್ಟ್ರದ ಪುಣೆಯಲ್ಲಿರುವ ದಾಖಲೆಗಳು ಹಾಗೂ ಮ್ಯೂಸಿಯಂನಲ್ಲಿರುವ ಖಡ್ಗವನ್ನು ರಾಜ್ಯಕ್ಕೆ ವಾಪಸ್ ತರಬೇಕು. ಇದರ ಬಗ್ಗೆ ಕೇಂದ್ರದ ಗಮನಕ್ಕೆ ತರಬೇಕು. ಪುಣೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ 32,000 ದಾಖಲೆಗಳಿವೆ‌. ಲಂಡನ್ ಮ್ಯೂಸಿಯಂನಲ್ಲಿರುವ ಚೆನ್ನಮ್ಮ ಖಡ್ಗ ರಾಜ್ಯಕ್ಕೆ ತರಬೇಕು. ಶಿವಾಜಿ ಖಡ್ಗ ಹೇಗೆ ತಂದ್ರೋ ಹಾಗೇ ಚೆನ್ನಮ್ಮ ಖಡ್ಗ ಸಹ ವಾಪಸ್ ತರಬೇಕು ಎಂದು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ಮನೆಯಲ್ಲಿ ಆಯುಧ ಪೂಜೆ