Select Your Language

Notifications

webdunia
webdunia
webdunia
webdunia

ಪೌರಕಾರ್ಮಿಕರ ಸಮಸವಸ್ತ್ರಕ್ಕೆ ಮೀಸಲಿಟ್ಟಿದ್ದ 15 ಕೋಟಿಗೆ ಕೊಕ್ ಕೊಟ್ಟ ಸರ್ಕಾರ

ಪೌರಕಾರ್ಮಿಕರ ಸಮಸವಸ್ತ್ರಕ್ಕೆ ಮೀಸಲಿಟ್ಟಿದ್ದ 15 ಕೋಟಿಗೆ ಕೊಕ್ ಕೊಟ್ಟ ಸರ್ಕಾರ
bangalore , ಭಾನುವಾರ, 22 ಅಕ್ಟೋಬರ್ 2023 (15:46 IST)
ಅನುದಾನ ಕಡಿತಕ್ಕೆ ಸಿಎಂ ಸಿದ್ದುಗೆ ಬಿಬಿಎಂಪಿ ಪೌರಕಾರ್ಮಿಕರ ಸಂಘ ಪತ್ರ ಬರೆದಿದೆ.ಗ್ಯಾರಂಟಿಗಳನ್ನು ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ ಅನುದಾನ ಹೊಂದಿಸಲು ಸಾಧ್ಯವೋ ಅನುದಾನಕ್ಕೆ ಕತ್ತರಿ ಹಾಕ್ತಿದೆ.ಈಗ ಪೌರಕಾರ್ಮಿಕರಿಗೆ ಮೀಸಲಿಟ್ಟದ 15 ಕೋಟಿ ರೂಪಾಯಿಗೂ ಬ್ರೇಕ್ ಹಾಕಿದೆ
 
ಸರ್ಕಾರದ ವಿರುದ್ಧ ಬಿಬಿಎಂಪಿ ಪೌರ ಕಾರ್ಮಿಕರ ಸಂಘ ಸಿಎಂಗೆ ಪತ್ರ ಬರೆದು ಆಕ್ರೋಶ ಹೊರಹಾಕಿದೆ.ಬಿಬಿಎಂಪಿ ಪೌರಕಾರ್ಮಿಕರಿಗೆ ಸಮಸವಸ್ತ್ರ, ವೃತ್ತಿ ಉಪಕರಣಗಳು..  ಇತರೆ ಖರ್ಚು ವೆಚ್ಚಕ್ಕೆಂದು 15 ಕೋಟಿ ರೂಪಾಯಿ ಮೀಸಲಿಡಲಾಗುತ್ತೆ. ಈ ಅನುದಾನದಲ್ಲಿ ಪೌರಕಾರ್ಮಿಕರಿಗೆ ಸಮಸವಸ್ತ್ರವನ್ನೆಲ್ಲಾ ಪಾಲಿಕೆ‌  ಸರಿದೂಗಿಸುತ್ತಿತ್ತು.

ಅಲ್ಲದೆ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿಗೂ ಇದೇ ಹಣ ವ್ಯಯಮಾಡ್ತಿತ್ತು.ಆದರೀಗ ಏಕಾಏಕಿ  ಮೀಸಲಿಟ್ಟ ಹಣವನ್ನ ರಾಜ್ಯ ಸರ್ಕಾರ ವಾಪಸ್ ಪಡೆದಿದೆ.ಸರ್ಕಾರದ ನಡೆಗೆ ಬಿಬಿಎಂಪಿ ಪೌರ ಕಾರ್ಮಿಕರ ಸಂಘ ತೀವ್ರ ಅಸಮಾಧಾನ ಹೊರಹಾಕಿದೆ.ಹಲವು ವರ್ಷಗಳಿಂದ ಖಾಯಂ ನೇಮಕಾತಿಗೆ ಪೌರಕಾರ್ಮಿಕರು ಹೋರಾಡುತ್ತಿದ್ದು,ನಮ್ಮ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.ಸಮವಸ್ತ್ರ ಹಾಗೂ ಇತರೆ ಉಪಕರಣಗಳ ಖರೀದಿಗೆ ಮೀಸಲಿಟ್ಟಿರುವ ಹಣವನ್ನು ವಾಪಾಸ್ ಕೊಡಬೇಕು.15 ಕೋಟಿಯಲ್ಲಿ ಒಟ್ಟು 18,500 ಪೌರ ಕಾರ್ಮಿಕರಿಗೆ ಅನುಕೂಲ ಒದಗಿಸಲಾಗುತ್ತಿತ್ತು.ಈ ವರ್ಷದಿಂದ ಅದೂ ಕೂಡ ಕಾರ್ಮಿಕರ ಕೈ ತಪ್ಪಲಿದೆ ಎಂದು ಬಿಬಿಎಂಪಿ ಪೌರ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಂಜನೇಯ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಹಿನ್ನೆಲೆ ಊರುಗಳತ್ತ ಮುಖ ಮಾಡಿದ ಜನ