Publish Date: Mon, 23 Oct 2023 (19:20 IST)
Updated Date: Mon, 23 Oct 2023 (19:58 IST)
ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ದಸರಾ ಶುಭಾಶಯ ತಿಳಿಸಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ದಸರಾ ಮಹೋತ್ಸವದ ಶುಭಾಶಯಗಳು. ನಾಳೆ ವಿಜಯದಶಮಿ, ಇವತ್ತು ಆಯುಧ ಪೂಜೆ ಇದೆ. ಮೈಸೂರಿನಲ್ಲಿ ನಾಳೆ ಜಂಬು ಸವಾರಿ ನಡೆಯುತ್ತದೆ. ಜಂಬೂಸವಾರಿಗೆ ಎಲ್ಲಾ ಸಿದ್ದತೆಗಳು ಆಗಿವೆ. ಹೆಚ್.ಸಿ.ಮಹಾದೇವಪ್ಪ ಇದರ ಜವಾಬ್ದಾರಿ ತಗೊಂಡು ಕೆಲಸ ಮಾಡಿದ್ದಾರೆ. ನಾನು ಉದ್ಘಾಟನೆಗೆ ಹೋಗಿದ್ದೆ, ಇವತ್ತೂ ಹೋಗ್ತಿದ್ದೇನೆ. ನಾಳೆ ವಿಜಯದಶಮಿಯಲ್ಲಿ ಭಾಗವಹಿಸಿ ಎಂದು ಜನತೆಗೆ ಮನವಿ ಮಾಡಿದ್ರು.