Select Your Language

Notifications

webdunia
webdunia
webdunia
webdunia

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯ ಹೋರಾಟಕ್ಕೆ ಫಲ ಸಿಕ್ಕಿದೆ: ವಿಪಕ್ಷ ನಾಯಕ ಆರ್.ಅಶೋಕ್‌

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯ ಹೋರಾಟಕ್ಕೆ ಫಲ ಸಿಕ್ಕಿದೆ: ವಿಪಕ್ಷ ನಾಯಕ ಆರ್.ಅಶೋಕ್‌

Sampriya

ಬೆಂಗಳೂರು , ಶನಿವಾರ, 21 ಡಿಸೆಂಬರ್ 2024 (17:48 IST)
ಬೆಂಗಳೂರು: ವಕ್ಫ್ ಬೋರ್ಡ್ ವಿಚಾರವಾಗಿ ನಮ್ಮ ಹೋರಾಟದ ಫಲವಾಗಿ ಸರ್ಕಾರ ನ್ಯಾಯಾಂಗ ತನಿಖೆ ಮಾಡಿದೆ. ಬಾಣಂತಿಯರ ಸಾವು ವಿಚಾರದಲ್ಲೂ ನ್ಯಾಯಾಂಗ ತನಿಖೆ ಮಾಡಲು ಒಪ್ಪಿದ್ದು, ಇದು ನಮ್ಮ ಹೋರಾಟದ ಫಲ  ವಿಪಕ್ಷ ನಾಯಕ ಆರ್‌.ಅಶೋಕ್ ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಈ ಬಾರಿ ಸರ್ಕಾರವನ್ನ ಸಮರ್ಥವಾಗಿ ಎದುರಿಸಿ ಕಟ್ಟಿ ಹಾಕಿದ್ದೇವೆ ಎಂದು ಬೆಳಗಾವಿ ಅಧಿವೇಶನ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ  ಅವರು ಹೇಳಿದರು.

ಈ ಬಾರಿ ಬಿಜೆಪಿ ಒಗ್ಗಟ್ಟಿನಿಂದ ಸರ್ಕಾರದ ವಿರುದ್ಧ ಹೋರಾಟ ಮಾಡಿದೆ. ಈ ಬಾರಿ 5 ದಿನ ಮಾತ್ರ ನಮಗೆ ಚರ್ಚೆಗೆ ಅವಕಾಶ ಸಿಕ್ತು. ಅದರಲ್ಲಿ ವಕ್ಫ್, ಬಾಣಂತಿಯರ ಸಾವು, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸರ್ಕಾರದ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.

ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. 30 ಕ್ಕೂ ಹೆಚ್ಚು ಶಾಸಕರು ಚರ್ಚೆ ಮಾಡಿದ್ದಾರೆ. ನಮ್ಮ ಶಾಸಕರು ಒಂದಲ್ಲ ಒಂದು ವಿಚಾರದಲ್ಲಿ ಮಾತಾಡೋ ವ್ಯವಸ್ಥೆ ಮಾಡಿದ್ದೇನೆ. ನಮ್ಮ ಎಲ್ಲಾ ಶಾಸಕರಿಗೆ ಮಾತಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಸಿಎಂ ಸಂತೆ ಭಾಷಣ ಬಿಟ್ಟು, ಘೋಷಣೆ ಮಾಡಿದ ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದು ಲೇವಡಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡವರಿಗಾಗಿ ಆತ್ಮಸ್ಥೈರ್ಯ ಅಭಿಯಾನ: ಪಂಚಮಸಾಲಿ ಪೀಠ ಸ್ವಾಮೀಜಿ