Select Your Language

Notifications

webdunia
webdunia
webdunia
webdunia

‘ಬಿಜೆಪಿ ಕುದುರೆ ವ್ಯಾಪಾರ ನಡೆಸೋಕೆ ಬಿಡೋಲ್ಲ ಎಂದ ಸಿದ್ದರಾಮಯ್ಯ’

‘ಬಿಜೆಪಿ ಕುದುರೆ ವ್ಯಾಪಾರ ನಡೆಸೋಕೆ ಬಿಡೋಲ್ಲ ಎಂದ ಸಿದ್ದರಾಮಯ್ಯ’
ಬೆಂಗಳೂರು , ಸೋಮವಾರ, 8 ಜುಲೈ 2019 (14:51 IST)
ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಬಿಜೆಪಿ ಹಣದ ಆಮಿಷವೊಡ್ಡುತ್ತಿದೆ. ಮೈತ್ರಿ ಪಕ್ಷಗಳ ಶಾಸಕರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಮಾಜಿ ಸಿಎಂ ಆರೋಪ ಮಾಡಿದ್ದಾರೆ.

ರಾಜ್ಯದ  ಮೈತ್ರಿ ಸರಕಾರ ಮುಂದುವರಿಯೋದ್ರಲ್ಲಿ ಅನುಮಾನ ಬೇಡ ಅಂತ ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಮುಂಬೈಗೆ ತೆರಳಿರುವ ಶಾಸಕರಿಗೆ ಸಚಿವ ಸ್ಥಾನ ದೊರಕದ ಅಸಮಧಾನವಿದೆ. ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ ಸಾಮಾಜಿಕ ನ್ಯಾಯ ಪರಿಗಣಿಸಿ 22 ಜನರಿಗೆ ಸಚಿವ ಸ್ಥಾನ ನೀಡಿದೆ. ಇದೀಗ ಎಲ್ಲ ಸಚಿವರೂ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ.

ಸಚಿವ ಸ್ಥಾನದ ಆಸೆಯಿಂದ ರಾಜೀನಾಮೆ ನೀಡಿದವರಿಗೆ ಮಂತ್ರಿ ಮಾಡಲಾಗುತ್ತದೆ. ಹೀಗಂತ ಡಿಸಿಎಂ ಪರಮೇಶ್ವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯವರು ನಿರಂತರವಾಗಿ ಮೈತ್ರಿ ಸರಕಾರ ಅಸ್ಥಿರಗೊಳಿಸಲಯ ಯತ್ನ ಮುಂದುವರಿಸಿದ್ದಾರೆ. ಆದರೆ ಅವರು ಸಫಲರಾಗಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರದ ಸಚಿವರಿಂದ ರಾಜೀನಾಮೆ: ಪ್ಲಾನ್ ಮೊರೆ ಹೋದ ದೋಸ್ತಿಗಳು