Publish Date: Sun, 07 Jul 2019 (18:38 IST)
Updated Date: Sun, 07 Jul 2019 (18:39 IST)
ಕೈ ಪಡೆ ಹಾಗೂ ತೆನೆ ಹೊತ್ತ ಮಹಿಳೆ ಪಕ್ಷಗಳ ಶಾಸಕರ ರಾಜೀನಾಮೆ ಪರ್ವ ಮುಂದುವರಿದಿರುವುದು ಮೈತ್ರಿ ಮುಖಂಡರ ನಿದ್ದೆಗೆಡಿಸಿದೆ.
ಜೆಡಿಎಸ್ – ಕಾಂಗ್ರೆಸ್ ಶಾಸಕರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಆಯಾ ಪಕ್ಷಗಳ ಪ್ರಮುಖರು ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ಅತೃಪ್ತ ಶಾಸಕರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಪಟ್ಟು ಬಿಡದೇ ಪ್ರಯತ್ನ ಮುಂದುವರಿಸಿರುವ ಮೈತ್ರಿ ಮುಖಂಡರು ಅತೃಪ್ತರಲ್ಲಿ ಕೆಲವರನ್ನಾದರೂ ವಾಪಸ್ ತರಲೇಬೇಕು ಎಂಬ ಹಠಕ್ಕೆ ಬಿದ್ದಂತೆ ಯತ್ನ ಮುಂದುವರಿಸಿದ್ದಾರೆ.
ಇನ್ನೊಂದೆಡೆ, ಇನ್ನಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವಿಷಯ ಹರಿದಾಡುತ್ತಿದ್ದು ಇದು ಮೈತ್ರಿ ಸರಕಾರದ ಪತನಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತಿದೆ.