Select Your Language

Notifications

webdunia
webdunia
webdunia
webdunia

25 ಶಾಸಕರು ರಾಜೀನಾಮೆ ಕೊಡೋದಿಲ್ಲ; ಮೈತ್ರಿ ಸರಕಾರ ಬೀಳಲ್ಲ

25 ಶಾಸಕರು ರಾಜೀನಾಮೆ ಕೊಡೋದಿಲ್ಲ; ಮೈತ್ರಿ ಸರಕಾರ ಬೀಳಲ್ಲ
ಚಿಕ್ಕೋಡಿ , ಭಾನುವಾರ, 7 ಜುಲೈ 2019 (16:16 IST)
ಶಾಸಕರು ರಾಜೀನಾಮೆ ಕೊಟ್ಟ ತಕ್ಷಣ ಮೈತ್ರಿ ಸರಕಾರ ಬೀಳಲ್ಲ. ಹೀಗಂತ ಸಚಿವರೊಬ್ಬರು ಹೇಳಿದ್ರು.  

ಸಚಿವ ಸತೀಶ್ ಜಾಕಿಹೊಳಿ, ಚಿಕ್ಕೋಡಿಯಲ್ಲಿ ಹೇಳಿಕೆ ನೀಡಿದ್ದಾರೆ.

ಸ್ಪೀಕರ್  ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೂ ಮೊದಲು ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದಲ್ಲಿ ಅಂತಿಮ ತೀರ್ಮಾನವಾಗುತ್ತದೆ. 25 ಜನ ಶಾಸಕರು ರಾಜೀನಾಮೆ ನೀಡುವ ವಿಚಾರ ಸುಳ್ಳು ಎಂದ್ರು.

webdunia
ರಾಜೀನಾಮೆ  ಕೊಟ್ಟವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಪರಿಹಾರ ಮಾಡುವುದಕ್ಕೆ ವರಿಷ್ಠರಿದ್ದಾರೆ. ರಾಜೀನಾಮೆ ಕೊಟ್ಟವರೇ ಪಕ್ಷಕ್ಕೆ ವಾಪಸ್ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಶಾಸಕರು ಮಾತ್ರ ರಾಜೀನಾಮೆ ನೀಡುತ್ತಾರೆ ಎಂದು ಮೊದಲೇ ಹೇಳಿದ್ದೆ. ಇನ್ಮುಂದೆ  ಯಾರೂ ರಾಜೀನಾಮೆ ನೀಡಲ್ಲ. ರಿವರ್ಸ್ ಆಪರೇಶನ್ ಮಾಡಲ್ಲ. ಅವಶ್ಯಕತೆಯೂ ನಮಗಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ರು.


Share this Story:

Follow Webdunia kannada

ಮುಂದಿನ ಸುದ್ದಿ

‘ಮೈತ್ರಿ ಸರಕಾರದಲ್ಲಿ ಹೆಚ್ಚು ಭ್ರಷ್ಟಾಚಾರ'