Publish Date: Wed, 03 Nov 2021 (16:11 IST)
Updated Date: Wed, 03 Nov 2021 (16:13 IST)
ಹುಬ್ಬಳ್ಳಿ : ಸಿಎಂ ತವರು ಜಿಲ್ಲೆ ಹಾನಗಲ್ ನಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂಬ ಬಗ್ಗೆ ವಿಮರ್ಶೆ ನಡೆಯುತ್ತಿದೆ.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ.
ನಟ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಅಚ್ಚು ಕಟ್ಟಾಗಿ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಜನತೆಯ ಹೃದಯ ಗೆದ್ದಿದ್ದಾರೆ. ಕುಟುಂಬ ಸದಸ್ಯನಂತೆ ನಿಂತ ಸಿಎಂ ಎಲ್ಲಾ ಕಾರ್ಯ ವಿಧಾನಗಳನ್ನು ಸಂಪೂರ್ಣಗೊಳಿಸಿದರು. ಆದರೆ ಮತ್ತೊಂದೆಡೆ ತಮ್ಮ ತವರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಲ್ಲಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಕ್ಟೋಬರ್ 30 ರಂದು ಹಾನಗಲ್ ವಿಧಾನಸಭೆ ಉಪ ಚುನಾವಣೆಗೆ ಮತದಾನ ನಡೆದಿತ್ತು, ಆದರೆ ಅಕ್ಟೋಬರ್ 30 ರಂದು ನಟ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದ್ದರು, ಹೀಗಾಗಿ ಟಿವಿ ಮುಂದೆ ಪುನೀತ್ ಅಂತಿಮ ಕಾರ್ಯ ವಿಧಾನಗಳ ಬಗ್ಗೆ ನೋಡುತ್ತಾ ಕುಳಿತ ಯುವಕರ ಮತದಾನ ಮಾಡಲು ಆಸಕ್ತಿ ತೋರಲಿಲ್ಲ ಎಂದು ಹೇಳಲಾಗಿದೆ.