Select Your Language

Notifications

webdunia
webdunia
webdunia
webdunia

ಬಿಜೆಪಿ ಸಂಸದ ಪ್ರತಾಪ್ ಸಿಂಹ ಒಬ್ಬ ಮೆಂಟಲ್: ವಿನಯ್ ಕುಲ್ಕರ್ಣಿ

ವಿನಯ್ ಕುಲಕರ್ಣಿ BJP MP
ಧಾರವಾಡ , ಸೋಮವಾರ, 4 ಡಿಸೆಂಬರ್ 2017 (17:05 IST)
ಮೈಸೂರು ಸಂಸದ ಪ್ರತಾಪ್ ಸಿಂಹ ಒಬ್ಬ ಮೆಂಟಲ್. ಅವನನ್ನು ಬಿಜೆಪಿಯವರು ನಿಮಾನ್ಸ್‌ಗೆ ಕಳುಹಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲ್ಕರ್ಣಿ ಗುಡುಗಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವ ಸಂಚನ್ನು ಪ್ರತಾಪ್ ಸಿಂಹ ಪಾಲಿಸುತ್ತಿದ್ದಾರೆ ಎಂದು ಆರೋಪಿಸಿದರು. 
 
ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟ ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವ ಅವರನ್ನು ಇದೇ ಪ್ರತಾಪ್ ಸಿಂಹ ಆತ್ಮಿಯರು ಅಪಮಾನಿಸಿದಾಗ ಬಿಜೆಪಿಯವರು ಒಂದೇ ಒಂದು ಮಾತು ಪ್ರಶ್ನಿಸಿದೆ ಯಾಕೆ ಮೌನವಾಗಿದ್ದರು ಬಿಜೆಪಿಯವರಿಗೆ ಮಾನವೂ ಇಲ್ಲ ಮರ್ಯಾದೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
ರಾಜ್ಯ ಸರಕಾರ ಅಮಿತ್ ಶಾ ಮತ್ತು ಪ್ರತಾಪ್ ಸಿಂಹ ವಿರುದ್ಧ ಕೇಸ್ ದಾಖಲಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಕಾಮನ್‌ಸೆನ್ಸ್ ಇಲ್ಲ: ಸಿಎಂ