ಬಿಜೆಪಿ ಶಾಸಕರು ವಿಧಾನಸೌಧದತ್ತ, ಸಿಎಂ ಕುಮಾರಸ್ವಾಮಿ ದೇವೇಗೌಡರ ನಿವಾಸದತ್ತ

ಸೋಮವಾರ, 22 ಜುಲೈ 2019 (09:58 IST)
ಬೆಂಗಳೂರು: ಇಂದು ವಿಶ್ವಾಸ ಮತ ಹಿನ್ನಲೆಯಲ್ಲಿ ಬಿಜೆಪಿ ಶಾಸಕರು ರೆಸಾರ್ಟ್ ನಿಂದ ವಿಧಾನಸೌಧದತ್ತ ಸಾಗಿದರೆ, ಇತ್ತ ಸಿಎಂ ಕುಮಾರಸ್ವಾಮಿ ತಂದೆ, ಜೆಡಿಎಸ್ ವರಿಷ್ಠ ದೇವೇಗೌಡರ ನಿವಾಸದತ್ತು ಹೊರಟಿದ್ದಾರೆ.


ಅಧಿವೇಶನಕ್ಕೂ ಮೊದಲು ತಂದೆ ದೇವೇಗೌಡರನ್ನು ಭೇಟಿಯಾಗಲು ಸಿಎಂ ಕುಮಾರಸ್ವಾಮಿ ತಮ್ಮ ಜೆಪಿ ನಗರ ನಿವಾಸದಿಂದ ಪದ್ಮನಾಭನಗರದತ್ತ ಸಾಗಿದ್ದಾರೆ. ಈ ವೇಳೆ ಇಂದು ಕಲಾಪದಲ್ಲಿ ಕೈಗೊಳ್ಳಬೇಕಾದ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಅತ್ತ ಯಲಹಂಕ ಬಳಿಯ ರೆಸಾರ್ಟ್ ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಜತೆಯಾಗಿ ವಿಧಾನಸೌಧದತ್ತ ಸಾಗಿದ್ದಾರೆ. ಇಂದಿನ ವಿಶ್ವಾಸ ಮತ ಯಾಚನೆ ವೇಳೆ ಸರ್ಕಾರದ ವಿರುದ್ಧ ಮತ ಹಾಕಿ ಮತ್ತೆ ಅಧಿಕಾರಕ್ಕೇರುವ ಹಂಬಲದಲ್ಲಿ ಬಿಜೆಪಿ ನಾಯಕರಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದೂ ವಿಶ್ವಾಸ ಮತ ನಡೆಯೋದು ಡೌಟು?!