Publish Date: Fri, 24 Mar 2023 (19:40 IST)
Updated Date: Fri, 24 Mar 2023 (19:02 IST)
ರಾಹುಲ್ ಗಾಂಧಿಯ ಅವರನ್ನ ಸಂಸದ ಸ್ಥಾನದಿಂದ ವಜಾಮಾಡಿರುವ ವಿಚಾರವಾಗಿ ಬಿಜೆಪಿ ಸಚಿವರು ಕೊರ್ಟ್ ನಿರ್ಧಾರವನ್ನ ಸ್ವಾಗತ ಮಾಡಿದ್ದಾರೆ.ಈ ಬಗ್ಗೆ ಮಾತನಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಇವತ್ತು ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನ ಸ್ಪೀಕರ್ ಅನರ್ಹಗೊಳಿಸಿದ್ದಾರೆ.ಈ ನೆಲದ ಕಾನೂನು ಎಲ್ಲರಿಗೂ ಒಂದೇ.ಈ ದೇಶದ ಸಮಾನ್ಯನಿಗೂ , ಅರಘ ಜ್ಞಾನೇಂದ್ರಗೂ ಒಂದೇ ರಾಹುಲ್ ಗಾಂಧಿಗೂ ಒಂದೇ ಕಾನೂನು.ಹಾಗಾಗಿ ಆ ಕಾನುನು ಕಾಯ್ದೆ ಪ್ರಕಾರ ಕ್ರಮ ಅಗಿದೆ.ಅದರಲ್ಲೇನು ಆಶ್ಚರ್ಯವಿಲ್ಲಾ,ಎಂದು ಹೇಳಿದರು.ಇನ್ನೂ ಸಚಿವ ಆರ್ ಅಶೋಕ್,ಬೈರತಿ ಬಸವರಾಜ್ ಮಾತನಾಡಿರಾಹುಲ್ ಗಾಂಧಿಯನ್ನ ಸ್ಪೀಕರ್ ಅನರ್ಹಗೊಳಿಸಿದ್ದನ್ನ ನಾನು ಸ್ವಾಗತ ಮಾಡ್ತೀನಿ.ಈ ರೀತಿ ರಾಜಕಾರಣಿಯೊಬ್ಬರು ಮಾತನಾಡೋದು ಸಮಾಜಕ್ಕೆ ಒಳ್ಳೆಯದ್ ಅಲ್ಲ.ನಾಲಿಗೆ ಹರಿಬಿಟ್ಟು ಮಾತನಾಡೋರಿಕೆ ಕೋರ್ಟ್ ಎಚ್ಚರಿಕೆ ಗಂಟೆ ಕೊಟ್ಟಿದೆ ಎಂದು ಹೇಳಿದರು.