Select Your Language

Notifications

webdunia
webdunia
webdunia
webdunia

ಬಜೆಟ್ ಮಂಡನೆಯಾದ್ರು ಬಿಜೆಪಿಗೆ ಸಿಗ್ತಿಲ್ಲ ಸಾರಥಿ...!

BJP has no charioteer when the budget is presented
bangalore , ಸೋಮವಾರ, 10 ಜುಲೈ 2023 (18:40 IST)
ವಿಪಕ್ಷ ನಾಯಕನ ಆಯ್ಕೆ ಇಂದು ಆಗುತ್ತೆ, ರಾತ್ರಿ ಆಗುತ್ತೆ, ಆಗೇ ಬಿಡ್ತು ಎಂಬ ರೆಡಿಮೇಡ್ ಡೈಲಾಗ್ ಗಳನ್ನ ಕೇಳಿ-ಕೇಳಿ ಸಾಕಾಗೋಗಿದೆ. ಅವರು ಕೊಡ್ತಿಲ್ಲ, ಇವರು ಬಿಡ್ತಿಲ್ಲ ಎಂಬಂತಾಗೋಗಿದೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ. ಕಳೆದ 10 ದಿನಗಳಿಂದ ವಿಪಕ್ಷ ನಾಯಕನ‌ ಆಯ್ಕೆ ಸರ್ಕಸ್ ಬಿಜೆಪಿ ನಡೆಯುತ್ತಲೇ ಇದ್ದು 3 ಬಣಗಳ ನಡುವೆ ಇನ್ನು ಒಮ್ಮತ ಮೂಡದ ಕಾರಣ ಆಯ್ಕೆ ಇನ್ನು ಕಗ್ಗಂಟಾಗೆ ಉಳಿದಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದು ಆಯ್ತು, ನಾಳೆ ಇಂದ ಬಜೆಟ್ ಮೇಲಿನ ಚರ್ಚೆ ಆರಂಭವಾಗ್ತಿದ್ದು , ಸದನದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳ್ಬೇಕಾದ ವಿಪಕ್ಷದ ಸಾರಥಿಯೇ ಇಲ್ಲದೆ ಬಜೆಟ್ ಮೇಲಿನ ಚರ್ಚೆ ಆರಂಭವಾಗ್ತಿರೋದೇ ದುರಂತ.ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರೆಬಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಮಧ್ಯೆ ವಿಪಕ್ಷ ನಾಯಕನ ಸ್ಥಾನಕ್ಕೆ ಟಫ್ ಫೈಟ್ ನಡೆಯುತ್ತಿದ್ದು. ಕಳೆದ 4 ದಿನಗಳ ಹಿಂದೆ ನಡೆದ ವೀಕ್ಷಕರ ಅಭಿಪ್ರಾಯ ಸಂಗ್ರಹದಲ್ಲು ಮೂವರ ಪರ- ವಿರೋಧ ಮತಗಳು ಚಲಾವಣೆಯಾಗಿವೆ. ಮಾಜಿ ಸಿಎಂ ಬೊಮ್ಮಾಯಿಯನ್ನ ‌ಆಯ್ಕೆ ಮಾಡಲು ಬಿಲ್  ಸಂತೋಷ್ ಒಪ್ತಿಲ್ಲ, ಯತ್ನಾಳ್ ಆಯ್ಕೆಗೆ ಯಡಿಯೂರಪ್ಪ ಒಪ್ತಿಲ್ಲ. ಸುನೀಲ್ ಕುಮಾರ್ ಆಯ್ಕೆ ಮಾಡಲು ಬಿಎಸ್ವೈ, ಸಂತೋಷ್ ಇಬ್ಬರಿಗೂ ಒಪ್ತಿಲ್ಲ ಎನ್ನುವಂತಾಗಿದೆ ಬಿಜೆಪಿ ಪರಿಸ್ಥಿತಿ. ಸದ್ಯ ವಿಪಕ್ಷ ನಾಯಕನ ಆಯ್ಕೆ ಚೆಂಡು ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದ್ದು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಆಸಕ್ತಿಯನ್ನೇ ತೋರ್ತಿಲ್ಲ. ರಾಜ್ಯದ ಬಣ ರಾಜಕೀಯದಿಂದ ಬೇಸತ್ತ ಕೇಸರಿ ಹೈಕಮಾಂಡ್ ಸದ್ಯಕ್ಕೆ ರಿಸ್ಕ್ ಬೇಡವೇ ಬೇಡ ಅನ್ನುತ್ತಿದ್ಯಂತೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕಿಯರ ಜಡೆ ಜಗಳಕ್ಕೆ ವಿದ್ಯಾರ್ಥಿಗಳು ಅತಂತ್ರ