Select Your Language

Notifications

webdunia
webdunia
webdunia
webdunia

ಬಿಜೆಪಿ ಮೊದಲ ಪಟ್ಟಿಯಲ್ಲೇ ಲಿಂಗಾಯತರಿಗೆ ಬಂಪರ್ ಅವಕಾಶ

ಬಿಜೆಪಿ ಮೊದಲ ಪಟ್ಟಿಯಲ್ಲೇ ಲಿಂಗಾಯತರಿಗೆ ಬಂಪರ್ ಅವಕಾಶ
ಬೆಂಗಳೂರು , ಮಂಗಳವಾರ, 10 ಏಪ್ರಿಲ್ 2018 (08:59 IST)
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಪೈಕಿ ಲಿಂಗಾಯತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

6 ಮಂದಿ ಬ್ರಾಹ್ಮಣ ಮತ್ತು ಒಬ್ಬ ಕೊಡವ ಸಮುದಾಯದವರಿಗೂ ಬಿಜೆಪಿ ಮಣೆ ಹಾಕಿದೆ. ಆದರೆ ಬಹುಪಾಲು ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬುದು ವಿಶೇಷ.

ಈ ಮೂಲಕ ಲಿಂಗಾಯತ ಸಮುದಾಯದ ಮತಕ್ಕೆ ಕೈ ಹಾಕಿರುವ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಬಿಜೆಪಿ ತಂತ್ರ ರೂಪಿಸಿದೆ. ಈ ಮೂಲಕ ಲಿಂಗಾಯತ ಸಮುದಾಯದ ಮತಗಳು ಒಡೆದು ಹೋಗದಂತೆ ಬಿಜೆಪಿ ರಣತಂತ್ರ ಹೆಣೆದಿದೆ. ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೋ ಎಂದು ಚುನಾವಣೆ ಮುಗಿದ ನಂತರವೇ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ವಿಭಜನೆ, ದಲಿತ ವಿರೋಧಿ ಧೋರಣೆಯೇ ಮೋದಿ ಮಂತ್ರ: ರಾಹುಲ್ ವಾಗ್ದಾಳಿ