Publish Date: Tue, 10 Apr 2018 (08:30 IST)
Updated Date: Tue, 10 Apr 2018 (08:32 IST)
ನವದೆಹಲಿ: ದಲಿತ ವಿರೋಧಿ ಧೋರಣೆ, ಭಾರತವನ್ನು ವಿಭಜಿಸಿ ಆಳುವುದೇ ಪ್ರಧಾನಿ ನರೇಂದ್ರ ಮೋದಿ ಉದ್ದೇಶ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
‘ಭಾರತದ ಐಕ್ಯತೆ ಒಡೆಯುವುದೇ ಬಿಜೆಪಿ ಮತ್ತು ಮೋದಿ ಮನಸ್ಥಿತಿಯಾಗಿದೆ. ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ದಬ್ಬಾಳಿಕೆ ಮಾಡುವುದು ಬಿಜೆಪಿ ಸಂಸ್ಕೃತಿ’ ಎಂದು ರಾಹುಲ್ ನವದೆಹಲಿಯಲ್ಲಿ ಕಾಂಗ್ರೆಸ್ ಕೈಗೊಂಡ ಕೋಮು ಸೌಹಾರ್ದತೆಗಾಗಿನ ಉಪವಾಸ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ದಲಿತರಿಗೆ ಮೋದಿ ಹೃದಯದಲ್ಲಿ ವಿಶೇಷ ಸ್ಥಾನಮಾನವಿದೆ ಎಂದು ಹೇಳುತ್ತಲೇ ಮಾಡುತ್ತಿರುವುದು ಇನ್ನೊಂದು. ಇಂತಹ ಮನಸ್ಥಿತಿಯವರ ವಿರುದ್ಧ ನಾವು ಇಂದು ಮಾತ್ರವಲ್ಲ, ಎಂದೆಂದಿಗೂ ಹೋರಾಟ ನಡೆಸಲಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.