Select Your Language

Notifications

webdunia
webdunia
webdunia
webdunia

ಸಚಿವ ಎ. ಮಂಜು ವಿರುದ್ಧ ಮತ್ತೆ ಸಿಡಿದೆದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಸಚಿವ ಎ. ಮಂಜು ವಿರುದ್ಧ ಮತ್ತೆ ಸಿಡಿದೆದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಹಾಸನ , ಸೋಮವಾರ, 9 ಏಪ್ರಿಲ್ 2018 (11:26 IST)
ಹಾಸನ: ಸಚಿವ ಎ. ಮಂಜು ವಿರುದ್ಧ ಮತ್ತೆ ಹಾಸನ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಿಡಿದೆದ್ದಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಇವರಿಬ್ಬರ ನಡುವೆ ಆರಂಭವಾದ ಅಸಮಾಧಾನ ಈಗ ಮತ್ತೆ ಮುಂದುವರಿದಿದೆ.

ಚುನಾವಣಾ ನೀತಿ ಸಂಹಿತ ಉಲ್ಲಂಘನೆ ಪ್ರಕರಣದಲ್ಲಿ ಸಚಿವರ ವಿರುದ್ಧ ರೋಹಿಣಿ ಸಿಂಧೂರಿ ನೋಟಿಸ್ ನೀಡಿದ್ದು, ಎಫ್ ಐಆರ್ ದಾಖಲು ಮಾಡಲು ತಯಾರಿ ನಡೆಯುತ್ತಿದೆ.

ನಿಯಮ ಮೀರಿ 800 ಕ್ಕೂ ಅರ್ಜಿಗಳ ವಿಲೇವಾರಿ ಮಾಡಿದ್ದಕ್ಕೆ ಸಚಿವ ಮಂಜು ವಿರುದ್ಧ ರೋಹಿಣಿ ಸಿಂಧೂರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಎರಡು ದಿನಗಳೊಳಗಾಗಿ ಉತ್ತರಿಸಲು ಸೂಚಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಜಿಲ್ಲಾಧಿಕಾರಿ ರೋಹಿಣಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮೊದಲ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಅಸಮಾಧಾನವೂ ಶುರು