Publish Date: Mon, 09 Apr 2018 (11:11 IST)
Updated Date: Mon, 09 Apr 2018 (11:13 IST)
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಅಸಮಾಧಾನವೂ ಹೊಗೆಯಾಡಿದೆ.
ಚಿಕ್ಕಪೇಟೆಯಲ್ಲಿ ಎನ್ ಆರ್ ರಮೇಶ್, ಶಿವಾಜಿನಗರದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಟಿಕೆಟ್ ನೀಡದ ಹಿನ್ನಲೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಎನ್ ಆರ್ ರಮೇಶ್ ಬೆಂಬಲಿಗರು ಬೆಂಗಳೂರಿನ ಎನ್ ಆರ್ ಕಾಲೋನಿ, ಯಡಿಯೂರಿನಲ್ಲಿ ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಸಮಾಧಾನಗೊಂಡಿರುವ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನು ಕೆಲವು ನಾಯಕರು ಮುಂದಿನ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಬಿಎಸ್ ವೈ ಜತೆ ಲಾಬಿ ನಡೆಸುತ್ತಿದ್ದಾರೆ. ಅಂತೂ ಅಭ್ಯರ್ಥಿಗಳ ಘೋಷಣೆಯಿಂದ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ಎದ್ದಿರುವುದು ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Mon, 09 Apr 2018 (11:11 IST)
Updated Date: Mon, 09 Apr 2018 (11:13 IST)