Publish Date: Tue, 08 May 2018 (16:00 IST)
Updated Date: Tue, 08 May 2018 (16:01 IST)
ಹಿಂದು ಮಹಿಳೆಯರನ್ನು ಲವ್ ಜಿಹಾದ್ ಮಾಡಲು ಮಸೀದಿಗಳಲ್ಲಿ ರೇಟ್ ಫಿಕ್ಸ್ ಮಾಡಿದ್ದಾರೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪೂರ ಬಂಧನಕ್ಕೆ ಉಪ ಚುನಾವಣಾಧಿಕಾರಿ ಹಾಗೂ ತಹಶಿಲ್ದಾರ ಮುಂದಾದ ಘಟನೆ ವರದಿಯಾಗಿದೆ.
ಕೊಪ್ಪಳದ ಗಂಗಾವತಿಯ ವಿರುಪಾಪುರ ತಾಂಡದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಚೈತ್ರಾ ಕುಂದಾಪುರ ಪ್ರಚಾರಕ್ಕೆ ತೆರಳಿದ್ದ ವೇಳೆ ಗಂಗಾವತಿಯ ತಹಶಿಲ್ದಾರ ಸಂತೋಷಿ ರಾಣಿ ಬಂಧಿಸಲು ತೆರಳಿದ್ದರು. ಚೈತ್ರಾರನ್ನು ಬಂಧಿಸದಂತೆ ವಿರೋಧಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಬಂಧನಕ್ಕೆ ಅಡ್ಡಿಯುಂಟು ಮಾಡಿದ್ದರು ಎನ್ನಲಾಗಿದೆ.
ರಸ್ತೆಯುದ್ದಕ್ಕು ಚೈತ್ರಾ ಕುಂದಾಪುರ ಪರ ಘೋಷಣೆ ಕೂಗುತ್ತ ಪೊಲೀಸ್ ಠಾಣೆಗೆ ಬಂದ ಯುವಕರು ಚೈತ್ರಾಳನ್ನ ಸೇಫ್ ಮಾಡಿ ಕಾರಿನಲ್ಲಿ ಯುವಕರು ಬೇರೆಡೆ ಕಳಿಸಿದ
ಚೈತ್ರಾ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ . ಇಕ್ಬಾಲ್ ಅನ್ಸಾರಿ ವಿರುದ್ದ ಕೂಡಾ ಪ್ರಕರಣ ದಾಖಲಾಗಿದೆ. ಮೊದಲು ಅವರನ್ನ ಬಂಧಿಸುವಂತೆ ಒತ್ತಾಯಿಸಿ ಚುನಾವಣಾ ಅಧಿಕಾರಿಯ ವಿರುದ್ದ ಬಿಜೆಪಿಯ ಯುವಕರು ಘೋಷಣೆ ಕೂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.