Publish Date: Thu, 30 Jan 2020 (20:26 IST)
Updated Date: Thu, 30 Jan 2020 (20:29 IST)
ಶಾಸಕ ರಮೇಶ್ ಜಾರಕಿಹೊಳಿ ರಾಜಕೀಯ ನಡೆ ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಮೈತ್ರಿ ಸರಕಾರದಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಬಂದು, ಬೈ ಎಲೆಕ್ಷನ್ ನಲ್ಲಿ ಗೆದ್ದರೂ ರಮೇಶ್ ಜಾರಕಿಹೊಳಿಗೆ ತಾವು ನಿರೀಕ್ಷೆ ಮಾಡಿದಂತೆ ರಾಜಕೀಯದಲ್ಲಿ ಸ್ಥಾನಮಾನ ಸಿಕ್ಕಿಲ್ಲ ಅನ್ನೋ ಬೇಸರದಲ್ಲಿ ಇದ್ದಾರಂತೆ.
ಬೈ ಎಲೆಕ್ಷನ್ ಸಮಯದಲ್ಲಿ ಚುನಾವಣೆ ಗೆದ್ದ ಬಳಿಕ ಉಪ ಮುಖ್ಯಮಂತ್ರಿಯಾಗೇ ಜಿಲ್ಲೆಗೆ ಬರುವೆ ಎಂದಿದ್ದ ರಮೇಶ್ ಜಾರಕಿಹೊಳಿಗೆ ಭಾರೀ ಮುಖಭಂಗವಾಗುತ್ತಿದೆ.
ಇನ್ನು, ಸಚಿವ ಬಿ.ಶ್ರೀರಾಮುಲು ಅವರೂ ಡಿಸಿಎಂ ಹುದ್ದೆ ರೇಸ್ ನಲ್ಲಿರೋದ್ರಿಂದ ಅವರೂ ಹಿನ್ನಡೆ ಅನುಭವಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರತೊಡಗಿವೆ.
ಸಚಿವ ಸಂಪುಟ ವಿಸ್ತರಣೆ ಆಗ್ತಿರೋ ಹಿನ್ನಲೆಯಲ್ಲಿ ರಮೇಶ್ ಜಾರಕಿಹೊಳಿ ನಡೆ ಕುತೂಹಲ ಮೂಡಿಸಿದೆ.