ಬೆಂಗಳೂರು: ಇಂದಿರಾ ಕಿಟ್ ಫಲಾನುಭವಿಗಳು ಸರ್ಕಾರದ ಈ ಮಹತ್ವದ ಬದಲಾವಣೆಯನ್ನು ತಪ್ಪದೇ ಗಮನಿಸಿ. ಸರ್ಕಾರ ಕಿಟ್ ನಲ್ಲಿ ನೀಡಲಾಗುವ ಆಹಾರ ಪದಾರ್ಥಗಳಲ್ಲಿ ಬದಲಾವಣೆ ತರಲಿದೆ.
ಅನ್ನಭಾಗ್ಯದ 5 ಕೆ.ಜಿ. ಅಕ್ಕಿ ಬದಲು ಕೇಂದ್ರ ಸರ್ಕಾರ ಇಂದಿರಾ ಆಹಾರ ಕಿಟ್ ಘೋಷಿಸಿತ್ತು. ಈ ಆಹಾರ ಕಿಟ್ ನಲ್ಲಿ ಬೇಳೆ, ಎಣ್ಣೆ, ಸಕ್ಕರೆ ಎಂಬಿತ್ಯಾದಿ ಅಗತ್ಯ ಆಹಾರ ವಸ್ತುಗಳನ್ನು ನೀಡುವುದಾಗಿ ಘೋಷಿಸಿತ್ತು. ಅದರಲ್ಲಿ ಈಗ ಸಣ್ಣ ಬದಲಾವಣೆ ಮಾಡಲಾಗಿದೆ.
ಇದುವರೆಗೆ ಇಂದಿರಾ ಆಹಾರ ಕಿಟ್ ನಲ್ಲಿ ಹೆಸರು ಬೇಳೆ ಬದಲಾಗಿ ತೊಗರಿ ಬೇಳೆ ನೀಡುವ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ 1 ಕೆ.ಜಿ ತೊಗರಿಬೇಳೆ, 1 ಕೆ.ಜಿ. ಹೆಸರು ಬೇಳೆ ನೀಡುವುದಾಗಿ ಸರ್ಕಾರ ಹೇಳಿತ್ತು.
ಆದರೆ ಇನ್ನೀಗ 1 ಕೆ.ಜಿ ಹೆಸರು ಬೇಳೆ ಬದಲಾಗಿ 2 ಸದಸ್ಯರಿರುವ ಕುಟುಂಬಕ್ಕೆ ಕಾಲು ಕೆ.ಜಿ. ಹೆಚ್ಚುವರಿ ತೊಗರಿಬೇಳೆ, 3 ಅಥವಾ ನಾಲ್ಕು ಸದಸ್ಯರಿರುವ ಕುಟುಂಬಕ್ಕೆ ಹೆಚ್ಚುವರಿ ಅರ್ಧ ಕೆ.ಜಿ. ತೊಗರಿಬೇಳೆ, ಐದಕ್ಕೂ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ಮುಕ್ಕಾಲು ಕೆ.ಜಿ. ಹೆಚ್ಚುವರಿ ತೊಗರಿಬೇಳೆ ನೀಡಲು ಸರ್ಕಾರ ನಿರ್ಧರಿಸಿದೆ.