Select Your Language

Notifications

webdunia
webdunia
webdunia
webdunia

ಶಿಗ್ಗಾಂವಿಯಲ್ಲಿ ಸೋಲಿನ ಹತಾಶೆಯಲ್ಲಿ ಕಾರು ಹತ್ತಿ ಹೊರಟೇ ಬಿಟ್ಟ ಭರತ್ ಬೊಮ್ಮಾಯಿ

Bharath Bommai

Krishnaveni K

ಶಿಗ್ಗಾಂವಿ , ಶನಿವಾರ, 23 ನವೆಂಬರ್ 2024 (12:22 IST)
ಶಿಗ್ಗಾಂವಿ: ಉಪಚುನಾವಣೆಯಲ್ಲಿ ತಂದೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದ ಭರತ್ ಬೊಮ್ಮಾಯಿಗೆ ಶಿಗ್ಗಾಂವಿಯಲ್ಲಿ ಹಿನ್ನಡೆಯಾಗಿದೆ. ಸೋಲಿನ ಅರಿವಾಗುತ್ತಿದ್ದಂತೇ ಅವರು ಕಾರು ಹತ್ತಿ ಹೊರಟಿದ್ದಾರೆ.

ಶಿಗ್ಗಾಂವಿ ಮತ ಎಣಿಕೆ ಕೇಂದ್ರದಲ್ಲಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಭರತ್ ಬೊಮ್ಮಾಯಿಗೆ ಕಾರ್ಯಕರ್ತರೂ ಸಾಥ್ ನೀಡಿದ್ದರು. ಈ ಬಾರಿ ಗೆಲ್ಲಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಗೆಲುವಿನತ್ತ ಮುಖ ಮಾಡಿದ್ದಾರೆ. ತಮಗೆ ಸೋಲಾಗುತ್ತದೆ ಎಂದು ಅರಿವಾಗುತ್ತಿದ್ದಂತೇ ಭರತ್ ಹತಾಶರಾದರು.

ತಮ್ಮ ಕಾರು ಹತ್ತಿ ಅಲ್ಲಿಂದ ಹೊರಟೇ ಹೋಗಿದ್ದಾರೆ. ಈ ವೇಳೆ ಕಾರ್ಯಕರ್ತರೂ ಬೇಸರವಿತ್ತು. ತಮ್ಮ ನಾಯಕನನ್ನು ಗೆಲ್ಲಿಸಲಾಗಲಿಲ್ಲ ಎಂಬ ಬೇಸರ ಕಾರ್ಯಕರ್ತರಲ್ಲಿತ್ತು. ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಕಾಂಗ್ರೆಸ್ ಗೆ ಇದು ಅಭೂತಪೂರ್ವ ಗೆಲುವು. ಇಲ್ಲಿ ಕೊನೆಯ ಕ್ಷಣದಲ್ಲಿ ಪಠಾಣ್ ರನ್ನು ತಂದು ನಿಲ್ಲಿಸಲಾಗಿತ್ತು. ಜೊತೆಗೆ ಸ್ಥಳೀಯ ನಾಯಕರ ವಿರೋಧವಿತ್ತು. ಹಾಗಿದ್ದರೂ ಜಮೀರ್ ಅಹ್ಮದ್ ಒತ್ತಾಸೆ ಮೇರೆಗೆ ಪಠಾಣ್ ಗೆ ಟಿಕೆಟ್ ನೀಡಲಾಗಿತ್ತು. ಈ ಯೋಜನೆ ಕಾಂಗ್ರೆಸ್ ಗೆ ವರ್ಕೌಟ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ ಸೋಲಿನ ಬಳಿಕ ಕುಮಾರಸ್ವಾಮಿ ಜೊತೆಗಿನ ಬಾಂಧವ್ಯಕ್ಕೆ ಬಿಜೆಪಿ ಬೈ ಬೈ