Publish Date: Sat, 27 Nov 2021 (17:17 IST)
Updated Date: Sat, 27 Nov 2021 (17:20 IST)
ಆಟೋ ಹತ್ತಿದ್ದ ಗ್ರಾಹಕರ ಮೇಲೆ ದರೋಡೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಪ್ಪರಪೇಟೆ ಪೊಲೀಸರ ಕಾರ್ಯಚರಣೆಯಿಂದ ಆರೋಪಿಯ ಬಂಧನವಾಗಿದೆ. ಮನೋಜ್ ಕುಮಾರ್ ದರೋಡೆ ಮಾಡಿದ ಆರೋಪಿಯಾಗಿದ್ದಾನೆ.ಮೆಜೆಸ್ಟಿಕ್ ನಿಂದ ಬೊಮ್ಮನಹಳ್ಳಿಗೆ ತೆರಳಲು ಆಟೋ ಹತ್ತಿದ್ದ ಯುವಕನನ್ನು ಸ್ವಲ್ಪ ದೂರ ಕರೆದೊಯ್ದು ನಂತರ ಆಟೋಗೆ ಮೂರು ನಾಲ್ಕು ಜನ ಆಟೋ ಹೇರಿ ಚಾಕು ತೋರಿಸಿ ದರೋಡೆ ಮಾಡಿದ್ದರು.
ಈ ಆರೋಪದ ಹಿನ್ನೆಲೆ ಪ್ರಕರಣ ದಾಖಲಿಕೊಂಡು ಆಟೋ ಚಾಲಕ ಮನೋಜ್ ಕುಮಾರ್ ನನ್ನು ಬಂಧಿಸಿ ತನಿಖೆ ಶುರು ಮಾಡಿದ್ದಾರೆ. ಇನ್ನು ತನಿಖೆ ವೇಳೆ ರಾಮಮೂರ್ತಿ ನಗರ ಸರಹದ್ದಿನಲ್ಲಿ ಕ್ಯಾಮರ ಹಾಗೂ ಲ್ಯಾಪ್ಟಾಪ್ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾನೆ. ಸದ್ಯ ಒಬ್ಬ ಆರೋಪಿ ಮನೋಜ್ ಕುಮಾರ್ ನನ್ನ ಬಂಧಿಸಿ 7ಲಕ್ಷ ಬೆಲೆ ಬಾಳುವ ವಸ್ತ ಗಳು ವಶಕ್ಕೆ ಪಡೆದು ಉಳಿದ ಆರೋಪಿಗಳಿಗೆ ಉಪ್ಪರಪೇಟೆ ಪೊಲೀಸರು ಬಲೆ ಬೀಸಿದ್ದಾರೆ.