Select Your Language

Notifications

webdunia
webdunia
webdunia
webdunia

ಚಾಲಕರಿಗೆ ಸಂತಸ, ಜನಸಾಮಾನ್ಯನಿಗೆ ಇನ್ನಷ್ಟು ಹೊರೆ!

ಚಾಲಕರಿಗೆ ಸಂತಸ, ಜನಸಾಮಾನ್ಯನಿಗೆ ಇನ್ನಷ್ಟು ಹೊರೆ!
ಬೆಂಗಳೂರು , ಗುರುವಾರ, 11 ನವೆಂಬರ್ 2021 (10:48 IST)
ಬಹಳ ದಿನಗಳಿಂದ ನಗರದ ಆಟೋ ಚಾಲಕರು ಬಾಡಿಗೆ ದರಗಳನ್ನು ಪರಿಷ್ಕರಿಸುವಂತೆ ಬೆಂಗಳೂರು ನಗರ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಲೇ ಇದ್ದರು.
ಆದರೆ ಅವರ ಮೊರೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಕಳೆದ 8 ವರ್ಷಗಳಿಂದ ಆಟೋ ಬಾಡಿಗೆ ದರ ಮಾತ್ರ ಪರಿಷ್ಕರಣೆಗೊಂಡಿರಲಿಲ್ಲ. ಆದರೆ ಜಿಲ್ಲಾಡಳಿತದಿಂದ ಅವರಿಗೆ ಈಗ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಈಗಿನ ಕನಿಷ್ಠ ದರ ರೂ. 25 ಡಿಸೆಂಬರ್ 1ರಿಂದ ಬದಲಾಗಿ ರೂ. 30 ಆಗಲಿದೆ! ಇದು ಆಟೋ ಚಾಲಕರು ಮತ್ತು ಅವರ ಕುಟುಂಬಗಳಿಗೆ ಸಂತೋಷದ ಸಂಗತಿಯಾದರೂ, ಜನಸಾಮಾನ್ಯರಿಗೆ ಹೆಚ್ಚುವರಿ ಹೊರೆಯಾಗಲಿದೆ. ಅವರ ಗೋಳು ಯಾವ ಆಡಳಿತವೂ ಕೇಳೋದಿಲ್ಲ.
ಸರಿ, ಆಟೋ ಬಾಡಿಗೆ ವಿಚಾರಕ್ಕೆ ಬರುವ. ಕಳೆದ 8 ವರ್ಷಗಳಿಂದ ಆಟೋ ಬಾಡಿಗೆಗಳಲ್ಲಿ ಹೆಚ್ಚಳವಾಗಿರಲಿಲ್ಲ. ಅವರಿಗೆ ಅನ್ಯಾಯವಾಗುತ್ತಿದ್ದಿದ್ದು ಸತ್ಯ. ನಾವು ಗಮನಿಸುವ ಹಾಗೆ ದರಗಳು, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರ ಸಂಬಳಗಳು ಪ್ರತಿವರ್ಷ ಪರಿಷ್ಕೃತಗೊಳ್ಳುತ್ತಿರುತ್ತವೆ. ಇನ್ಕ್ರಿಮೆಂಟ್ಗಳು  ಸಿಗುತ್ತವೆ, ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಸಿಗುತ್ತದೆ. ಆದರೆ ಆಟೋ ಚಾಲಕರಿಗೆ ಎಂಥದ್ದೂ ಇಲ್ಲ. ಪೆಟ್ರೋಲಿಯಂ ಉತ್ಪನ್ನಗಳ ದರಗಳು ಮತ್ತು ಹೋಟೆಲ್ ತಿಂಡಿಗಳ ಬೆಲೆಗಳ ಬೆಲೆಯೂ ಹೆಚ್ಚಾಗಿವೆ.ಈಗ ಜಾರಿಯಲ್ಲಿರುವ ರೂ. 25 ಕನಿಷ್ಟ ದರ ಡಿಸೆಂಬರ್ 1 ರಿಂದ ರೂ. 30 ಆಗಲಿದೆ. ಮಿನಿಮಮ್ ಚಾರ್ಜ್ ನಂತರ ಪ್ರತಿ ಕಿಲೋಮೀಟರ್ಗೆ ಈಗಿನ ರೂ 13 ಡಿಸೆಂಬರ್ 1 ರಿಂದ ರೂ 15 ಆಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇಳಿದ್ರೆ ಶಾಕ್ ಆಗ್ತೀರ! ಮಾಜಿ ಪ್ರಿಯತಮನ ರಿವೇಂಜ್!