Publish Date: Sat, 27 Nov 2021 (17:14 IST)
Updated Date: Sat, 27 Nov 2021 (17:16 IST)
ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ನಕಲಿ ಕೇಂದ್ರ ಸರ್ವೇ ಇಲಾಖೆ ಸಿಬ್ಬಂದಿಯು ಬೆಂಗಳೂರು ಸಿಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ನಾನು ಕೇಂದ್ರ ಸರ್ಕಾರದ ಸರ್ವೇ ಇಲಾಖೆಯ ಉನ್ನತ ಅಧಿಕಾರಿ ಎಂದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಆರೋಪಿಯಾಗಿದ್ದಾನೆ.ಅನೇಕ ಜನರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಇದೀಗ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಶುರುಮಾಡಿದ್ದಾರೆ.
ಆರೋಪಿ ತನ್ನ ಕಾರಿಗೆ ಕೇಂದ್ರ ಸರ್ಕಾರದ ನಕಲಿ ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದ, ಅಲ್ಲದೆ, ನಿರುದ್ಯೋಗಳಿಂದ ಪಡೆದ ಹಣದಿಂದ ಕಾರು, ಊರಿನಲ್ಲಿ ಮನೆ, ತುಮಕೂರಿನಲ್ಲಿ ಹೋಟೆಲ್, ಕೆಂಗೇರಿಯಲ್ಲಿ ಪ್ಲಾಟ್ ಹಾಗೂ ಚಿನ್ನಾಭರಣ ಖರೀಸಿದ್ದ, ಇದೀಗ ಸಿಸಿಬಿ ಪೊಲೀಸರು ಆರೋಪಿಯಿಂದ ನಕಲಿ ಗುರುತಿನ ಚೀಟಿ, ಮೊಬೈಲ್ ಪೋನ್, ಟ್ಯಾಬ್, ಲ್ಯಾಪ್ ಟಾಪ್, ಚಕ್ ಹಾಗೂ ಬಾಂಡ್ ಪೇಪರ್. ಆತ ಖರೀಸಿದ್ದ ಆಸ್ತಿ ಪತ್ರಗಳನ್ನು ಸಹ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.