Select Your Language

Notifications

webdunia
webdunia
webdunia
webdunia

ಜೂಜು ನೆಡೆಸುತ್ತಿದವರ ಬಂಧನ

police department
ಬೆಂಗಳೂರು , ಶುಕ್ರವಾರ, 26 ನವೆಂಬರ್ 2021 (15:11 IST)
ವಿಡಿಯೋ ಗೇಮ್ಸ್ ಜೂಜು ನಡೆಸುತ್ತಿದ್ದ ಸ್ಥಳದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಐದು ಮಂದಿಯನ್ನು ಬಂಧಿಸಿ ಹತ್ತು ಸಾವಿರ ಹಣ, 83 ವಿಡಿಯೋ ಗೇಮ್ ಯಂತ್ರಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್.ಕೆ.ಬಿ.ರಸ್ತೆ, ಕಾವಲ್‍ಬೈರಸಂದ್ರ ಎಕ್ಸ್‍ಟೆಕ್ಷನ್, ರಂಖನಗರದ ಕಟ್ಟಡವೊಂದರ ಮೊದಲ ಮಹಡಿಯಲ್ಲಿರುವ ಶ್ರೀ ಸಾಯಿವಿನಾಯಕ ಸ್ಪೋಟ್ಸ್ ್ ಅಂಡ್ ಕಲ್ಚರಲ್ ಅಸೋಸಿಯೇಷನ್‍ನಲ್ಲಿ ಐದಾರು ಮಂದಿ ಸೇರಿಕೊಂಡು ಹಣವನ್ನು ಪಣವಾಗಿಟ್ಟುಕೊಂಡು ವಿಡಿಯೋ ಗೇಮ್ಸ್ ಎಂಬ ಜೂಜಾಟ ನಡೆಸುತ್ತಿದ್ದರು.
 
ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳದ ಮೇಲೆ ದಾಳಿ ಜೂಜಾಟದಲ್ಲಿ ತೊಡಗಿದ್ದ ಐದು ಮಂದಿಯನ್ನು ಬಂಧಿಸಿ ಹಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೋಪಿನಲ್ಲಿ ಯುವತಿ ಮೇಲೆ ಹೊಸಕೋಟೆ ರೇಪ್!