Select Your Language

Notifications

webdunia
webdunia
webdunia
webdunia

ಜನತೆಗೆ ಬೆಲೆ ಏರಿಕೆಯ ಬಿಸಿ!

ಜನತೆಗೆ ಬೆಲೆ ಏರಿಕೆಯ ಬಿಸಿ!
ಬೆಂಗಳೂರು , ಮಂಗಳವಾರ, 9 ನವೆಂಬರ್ 2021 (10:31 IST)
ಬೆಂಗಳೂರು :  ಒಂದೆಡೆ ಆಟೊ ಪ್ರಯಾಣ ದರ ಹೆಚ್ಚಳವಾದರೆ ಇನ್ನೊಂದೆಡೆ ನಗರ ಜನತೆ ಹೆಚ್ಚು ಆಶ್ರಯಿಸುವ ಹೋಟೆಲ್ಗಳ ತಿಂಡಿ ದರದಲ್ಲೂ ಏರಿಕೆ ಕಂಡುಬಂದಿದೆ.
ಆದರೆ ಕೆಲವು ಹೋಟೆಲ್ಗಳು ಮಾತ್ರ ದರವನ್ನು ಏರಿಸಿರುವುದು ಸ್ವಲ್ಪ ಮಟ್ಟಿನ ಸಮಾಧಾನವನ್ನು ತಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೊರಿಕ್ಷಾ ಪ್ರಯಾಣ ದರವನ್ನು ಕನಿಷ್ಠ 25 ರೂ. ನಿಂದ 30 ರೂ.ಗಳಿಗೆ ಏರಿಕೆ ಮಾಡಿ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರವು ಡಿ. 1ರಿಂದ ಜಾರಿಗೆ ಬರಲಿದೆ.
ಪ್ರಯಾಣ ದರ ಏರಿಕೆಗೆ ಪಟ್ಟು ಹಿಡಿದಿದ್ದ ಆಟೊ ಚಾಲಕರ ಸಂಘಟನೆಗಳ ಒತ್ತಡಕ್ಕೆ ಮಣಿದಿರುವ ಪ್ರಾಧಿಕಾರವು, ಕನಿಷ್ಠ ಪ್ರಯಾಣ ದರವನ್ನು ಮೊದಲ 2 ಕಿ.ಮೀ ಗೆ 5 ರೂ., ಆನಂತರದ ಪ್ರತಿ ಕಿ.ಮೀ ಗೆ 2 ರೂ. ಹೆಚ್ಚಳ ಮಾಡಿದೆ. ಲಗೇಜು ದರವನ್ನು 2 ರೂ. ನಿಂದ 5 ರೂ. ಗೆ ಏರಿಕೆ ಮಾಡಲಾಗಿದೆ.
ಈ ಮೊದಲು ಕನಿಷ್ಠ ಪ್ರಯಾಣ ದರವು 1.9 ಕಿ.ಮೀ ಗೆ 25 ರೂ., ಆನಂತರದ ಪ್ರತಿ ಕಿ.ಮೀ ಗೆ 13 ರೂ. ಇತ್ತು. ಇದೀಗ ಆ ದರವನ್ನು ಕ್ರಮವಾಗಿ 30 ರೂ. ಮತ್ತು 15 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ, ಲಗೇಜು ದರವನ್ನು ಮೊದಲ 20 ಕೆ.ಜಿ ಯಿಂದ ನಂತರದ ಪ್ರತಿ 20 ಕೆ.ಜಿ ಗೆ ಅಥವಾ ಅದರ ಭಾಗಕ್ಕೆ ವಿಧಿಸುತ್ತಿದ್ದ ದರವನ್ನು 2 ರೂ. ನಿಂದ 5 ರೂ.ಗಳಿಗೆ ಏರಿಕೆ ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಡವೆ ಖರೀದಿಸಿದ ಪತ್ನಿಯನ್ನು ಹೊಡೆದು ಕೊಂದ ಪತಿ!